ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್ ಪ್ರಧಾನಿ ಚುನಾವಣೆ: 4ನೇ ಸುತ್ತಿನ ಮತದಾನದಲ್ಲೂ ರಿಷಿ ಸುನಕ್ ಜಯಭೇರಿ

Last Updated 19 ಜುಲೈ 2022, 16:05 IST
ಅಕ್ಷರ ಗಾತ್ರ

ಲಂಡನ್: ಕನ್ಸರ್ವೇಟಿವ್ ಪಕ್ಷದ ನಾಯಕನ ಸ್ಥಾನ ಮತ್ತು ಬ್ರಿಟನ್ ಪ್ರಧಾನಿ ಆಯ್ಕೆ ಪ್ರಕ್ರಿಯೆಯ ಮತ್ತೊಂದು ಸುತ್ತಿನ ಮತದಾನದಲ್ಲಿ ಮಾಜಿ ಹಣಕಾಸು ಸಚಿವ, ಭಾರತ ಮೂಲದ ರಿಷಿ ಸುನಕ್ ಎಲ್ಲರಿಗಿಂತ ಹೆಚ್ಚು ಮತಗಳನ್ನು ಪಡೆದು ಅಂತಿಮ ಸುತ್ತಿನತ್ತ ದಾಪುಗಾಲಿಟ್ಟಿದ್ದಾರೆ. ಅಂತಿಮ ಸುತ್ತಿನಲ್ಲಿ ಇಬ್ಬರು ಸ್ಪರ್ಧಿಗಳು ಮಾತ್ರ ಉಳಿಯಲಿದ್ದಾರೆ.

ಕನ್ಸರ್ವೇಟಿವ್ ಪಕ್ಷದ ನಾಲ್ಕನೇ ಸುತ್ತಿನ ಮತದಾನದಲ್ಲಿ ರಿಷಿ ಸುನಕ್ ಅವರು 118 ಮತಗಳನ್ನು ಪಡೆದಿದ್ದಾರೆ. ಅಂತಿಮ ಸುತ್ತಿನ ಇಬ್ಬರು ಸ್ಪರ್ಧಿಗಳ ಪೈಕಿ ಒಬ್ಬರಾಗಲು 5ನೇ ಸುತ್ತಿನ ಮತದಾನದಲ್ಲಿ ರಿಷಿಗೆ ಕನ್ಸರ್ವೇಟಿವ್ ಪಕ್ಷದ ಮೂರನೇ ಒಂದರಷ್ಟು ಅಂದರೆ 120 ಮತಗಳ ಅಗತ್ಯವಿದೆ.

ಸೋಮವಾರಕ್ಕಿಂತ(115) ರಿಷಿ ಸುನಕ್ ಅವರ ಮತ ಗಳಿಕೆ ಹೆಚ್ಚಾಗಿದೆ. ವಾಣಿಜ್ಯ ಸಚಿವರಾದ ಪೆನ್ನಿ ಮರ್ಡೌಂಟ್ 92 ಮತ ಮತ್ತು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಜ್ 86 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಮರ್ಡೌಂಟ್ ಮಂಗಳವಾರ 10 ಮತಗಳನ್ನು ಹೆಚ್ಚಿಗೆ ಪಡೆದಿದ್ದರೆ, ಲಿಜ್ ಮತ ಗಳಿಕೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ.

59 ಮತಗಳನ್ನು ಪಡೆದಿರುವ ಮಾಜಿ ಸಚಿವರಾದ ಬಡೆನೊಚ್ ರೇಸ್‌ನಿಂದ ಹೊರಬಿದ್ದಿದ್ದಾರೆ.

ಬುಧವಾರ, ನಡೆಯಲಿರುವ ಐದನೇ ಸುತ್ತಿನ ಮತದಾನದ ಬಳಿಕ ಅಂತಿಮ ಸುತ್ತಿನ ಇಬ್ಬರು ಸ್ಪರ್ಧಿಗಳು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT