ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣ್‌ ಸೇವಾ ಸಂಸ್ಥಾನಕ್ಕೆ ₹1.34 ಕೋಟಿ ಅನುದಾನ

Last Updated 26 ಮಾರ್ಚ್ 2021, 7:07 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತದಲ್ಲಿ ಅಂಗವಿಕಲರಿಗಾಗಿ ‘ಪ್ರಾಸ್ಥೆಟಿಕ್ಸ್‌’ ಮತ್ತು ‘ಆರ್ಥೋಟಿಕ್ಸ್’ ತಯಾರಿಸುವ ಘಟಕವನ್ನು ಸ್ಥಾಪಿಸಲು ರೋಟರಿ ಇಂಟರ್‌ನ್ಯಾಷನಲ್ ಸಂಸ್ಥೆಯು ನಾರಾಯಣ್‌ ಸೇವಾ ಸಂಸ್ಥಾನಕ್ಕೆ(ಎನ್‌ಎಸ್‌ಎಸ್‌)ಗೆ ₹1.34 ಕೋಟಿ ಅನುದಾನ ನೀಡುವುದಾಗಿ ಘೋಷಿಸಿದೆ.

ಅಂಗವಿಕಲರು ಮತ್ತು ದೀನದಲಿತರ ಕಲ್ಯಾಣಕ್ಕಾಗಿ ಎನ್‌ಎಸ್‌ಎಸ್‌ ಶ್ರಮಿಸುತ್ತದೆ. (ಪ್ರಾಸ್ಥೆಟಿಕ್ಸ್‌ ಅಂದರೆ ಕೃತಕ ದೇಹದ ಉಪಕರಣ. ಕೃತಕ ಉಪಕರಣಗಳನ್ನು ಬಳಸಲು ಸಹಾಯ ಮಾಡುವ ಔಷಧಿಯನ್ನು ಆರ್ಥೋಟಿಕ್ಸ್ ಎಂದು ಕರೆಯುತ್ತಾರೆ)

ಭಾರತದಲ್ಲಿ ಕೇಂದ್ರೀಯ ಫ್ಯಾಬ್ರಿಕೇಷನ್ ಘಟಕವನ್ನು ನಿರ್ಮಿಸಲಾಗುವುದು. ಈ ಘಟಕದಲ್ಲಿ ‘ಆರ್ಥೋಟಿಕ್ಸ್’ ಮತ್ತು ‘ಪ್ರಾಸ್ಥೆಟಿಕ್ಸ್‌’ ಸಾಧನಗಳ‌ನ್ನು ಉತ್ಪಾದಿಸಿ, ಅಂಗವಿಕಲರಿಗೆ ಉಚಿತವಾಗಿ ವಿತರಿಸಲು ಉದ್ದೇಶಿಸಲಾಗಿದೆ.

2019ರಲ್ಲಿ ನಾರಾಯಣ್‌ ಸೇವಾ ಸಂಸ್ಥಾನವು ಜಾರ್ಜಿಯಾ, ಅಟ್ಲಾಂಟಾದಲ್ಲಿ ‘ಸೇವಾ ಪ್ರಾಜೆಕ್ಟ್‌’ ಹೆಸರಿನಡಿಯಲ್ಲಿ ಅಭಿಯಾನ ಆರಂಭಿಸಿತ್ತು. ಈ ಅಭಿಯಾನದಡಿ ಮಕ್ಕಳು ಸಮುದಾಯ ಸೇವೆ ಮಾಡುವ ಮೂಲಕ ಹಣವನ್ನು ಸಂಗ್ರಹಿಸಿದರು. ಅವರು ಸೋಡಾ, ಚಹಾ, ಸಮೋಸಾ ಮತ್ತು ಪಾಪ್‌ಕಾರ್ನ್‌ಗಳನ್ನು ಮಾರಾಟ ಮಾಡಿದ್ದರು. ಜತೆಗೆ, ‘ಸೇವಾ ಪ್ರಾಜೆಕ್ಟ್‌’ ಬಗ್ಗೆಯೂ ಜನರಿಗೆ ವಿವರಿಸಿದ್ದರು ಎಂದು ಎನ್‌ಎಸ್‌ಎಸ್‌ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

‘ಸೇವಾ ಪ್ರಾಜೆಕ್ಟ್‌’ ಎರಡು ವರ್ಷಗಳನ್ನು ಪೂರೈಸಿದೆ. ರೋಟರಿ ಇಂಟರ್‌ನ್ಯಾಷನಲ್‌ ಮತ್ತು ರೋಟರಿ ಫೌಂಡೇಶನ್‌ ನಮಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದೆ. ಇದಕ್ಕೆ ನಾವು ಸದಾ ಕೃತಜ್ಞರು’ ಎಂದು ಎನ್‌ಎಸ್‌ಎಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT