ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ: ಸರಳ ಬಹುಮತದತ್ತ ನೇಪಾಳಿ ಕಾಂಗ್ರೆಸ್‌ ಮೈತ್ರಿಕೂಟ

Last Updated 25 ನವೆಂಬರ್ 2022, 12:25 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳ ಸಂಸತ್ತು ಚುನಾವಣೆಯಲ್ಲಿ ಪ್ರಧಾನಿ ಶೇರ್ ಬಹದ್ದೂರ್‌ ದೇವುಬಾ ನೇತೃತ್ವದ ಆಡಳಿತರೂಢ ನೇಪಾಳಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮೈತ್ರಿ ಕೂಟವು ಬಹುಮತದತ್ತ ಹೆಜ್ಜೆ ಹಾಕಿದೆ. 124 ಸ್ಥಾನಗಳಲ್ಲಿ 67 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ನೇರ ಮತದಾನದಲ್ಲಿ 42 ಸ್ಥಾನ ಗೆಲ್ಲುವ ಮೂಲಕ ಎನ್‌ಸಿಪಿ ಏಕೈಕ ದೊಡ್ಡ ಪಕ್ಷವಾಗಿದೆ. ಮೈತ್ರಿಕೂಟದ ಸಿಪಿಎನ್‌– ಮಾವೋವಾದಿ ಸೆಂಟರ್ ಹಾಗೂ ಸಿಪಿಎನ್‌–ಯುನಿಫೈಡ್‌ ಸೋಷಿಯಲಿಸ್ಟ್‌ ಪಕ್ಷ ಕ್ರಮವಾಗಿ 12 ಹಾಗೂ 10 ಸ್ಥಾನ ಗೆದ್ದಿವೆ. ಲೋಕತಾಂತ್ರಿಕ್‌ ಸಮಾಜವಾದಿ 2 ಸ್ಥಾನಗಳಲ್ಲಿ ಮತ್ತು ರಾಷ್ಟ್ರೀಯ ಜನಮೋರ್ಚಾ ಒಂದು ಸ್ಥಾನದಲ್ಲಿ ಗೆಲುವು ಪಡೆದುಕೊಂಡಿವೆ.

ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರ ನೇತೃತ್ವದ ಸಿಪಿಎನ್‌–ಯುಎಂಎಲ್‌ ಮೈತ್ರಿಕೂಟ 30 ಸ್ಥಾನ ಗೆದ್ದಿದೆ. ಮಿತ್ರ ಪಕ್ಷಗಳಾದ ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ಹಾಗೂ ಜನತಾ ಸಮಾಜವಾದಿ ಪಕ್ಷ ಕ್ರಮವಾಗಿ 5 ಹಾಗೂ 3 ಸ್ಥಾನ ಗೆದ್ದಿವೆ.

ಸಂಸತ್‌ ಮತ್ತು ಏಳು ಪ್ರಾಂತೀಯ ವಿಧಾನಸಭೆಗಳಿಗೆ ಭಾನುವಾರ ಚುನಾವಣೆ ನಡೆದಿತ್ತು. 275 ಸ್ಥಾನಗಳಲ್ಲಿ 165 ಸ್ಥಾನಗಳಿಗೆ ನೇರ ಮತದಾನದ ಮೂಲಕ ಆಯ್ಕೆ ನಡೆಯಲಿದೆ. ಸರಳ ಬಹುಮತ ಪಡೆಯಲು 138 ಸ್ಥಾನ ಗೆಲ್ಲಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT