ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳದಲ್ಲಿ ರೂಪೆ ಕಾರ್ಡ್‌ ಸೇವೆ

Last Updated 3 ಏಪ್ರಿಲ್ 2022, 13:44 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರೂಪೆ ಕಾರ್ಡ್ ಹೊಂದಿರುವವರು ಇನ್ನು ಮುಂದೆ ನೇಪಾಳದಲ್ಲಿ ಪಾವತಿ ವಹಿವಾಟು ನಡೆಸಬಹುದು. ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ನೇಪಾಳದಲ್ಲಿ ರೂಪೆ ವಹಿವಾಟು ಆರಂಭಕ್ಕೆ ಭಾನುವಾರ ಚಾಲನೆ ನೀಡಿದ್ದಾರೆ.

ಭೂತಾನ್, ಸಿಂಗಪುರ ಮತ್ತು ಸಂಯುಕ್ತ ಅರಬ್ ಸಂಸ್ಥಾನಗಳಲ್ಲಿ (ಯುಎಇ) ರೂಪೆ ಕಾರ್ಡ್‌ಗೆ ಈಗಾಗಲೇ ಮಾನ್ಯತೆ ಇದೆ. ಈಗ ಈ ಸಾಲಿಗೆ ನೇಪಾಳ ಕೂಡ ಸೇರಿಕೊಂಡಿದೆ. ‘ನೇಪಾಳದಲ್ಲಿ ರೂಪೆ ಕಾರ್ಡ್‌ ವಹಿವಾಟು ಶುರುವಾಗುತ್ತಿರುವುದು ಭಾರತ ಮತ್ತು ನೇಪಾಳದ ಹಣಕಾಸಿನ ಸಂಬಂಧಕ್ಕೆ ಹೊಸ ಅಧ್ಯಾಯ ಸೇರ್ಪಡೆ ಆದಂತಾಗಿದೆ’ ಎಂದು ಮೋದಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT