ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಢಚರ್ಯೆ: ಅಮೆರಿಕದ 'ವಾಲ್‌ ಸ್ಟ್ರೀಟ್‌ ಜರ್ನಲ್‌' ಪತ್ರಕರ್ತ ರಷ್ಯಾದಲ್ಲಿ ಸೆರೆ

Last Updated 30 ಮಾರ್ಚ್ 2023, 12:44 IST
ಅಕ್ಷರ ಗಾತ್ರ

ಮಾಸ್ಕೊ: ಗೂಢಚರ್ಯೆ ನಡೆಸಿರುವ ಆಪಾದನೆಯ ಮೇಲೆ ಅಮೆರಿಕದ ‘ವಾಲ್‌ ಸ್ಟ್ರೀಟ್‌ ಜರ್ನಲ್‌’ನ ವರದಿಗಾರರೊಬ್ಬರನ್ನು ಬಂಧಿಸಿರುವುದಾಗಿ ರಷ್ಯಾದ ಉನ್ನತ ಭದ್ರತಾ ಏಜೆನ್ಸಿ ಹೇಳಿದೆ.

ರಹಸ್ಯ ಮಾಹಿತಿಗಳನ್ನು ಕಲೆಹಾಕಲು ಯತ್ನಿಸುತ್ತಿದ್ದ ವರದಿಗಾರ ಇವಾನ್‌ ಗೆರ್ಸ್‌ಕೊವಿಚ್‌ ಎಂಬುವವರನ್ನು ಯೆಕಟೆರಿನ್ ಬರ್ಗ್‌ ನಗರದಲ್ಲಿ ಬಂಧಿಸಲಾಯಿತು ಎಂದು ಫೆಡರಲ್‌ ಸೆಕ್ಯುರಿಟಿ ಸರ್ವೀಸ್‌ (ಎಫ್‌ಎಸ್‌ಬಿ) ಗುರುವಾರ ಹೇಳಿದೆ.

ರಷ್ಯಾ ಸೇನೆಯ ಕೈಗಾರಿಕಾ ಸಂಕೀರ್ಣದಲ್ಲಿರುವ ಉದ್ಯಮವೊಂದರ ಚಟುವಟಿಕೆಗಳ ಬಗ್ಗೆ ರಹಸ್ಯ ಮಾಹಿತಿಗಳನ್ನು ಗೆರ್ಸ್‌ಕೊವಿಚ್‌ ಅವರು ಅಮೆರಿಕದ ನಿರ್ದೇಶನದ ಮೇರೆಗೆ ಕಲೆ ಹಾಕುತ್ತಿದ್ದರು ಎಂದು ಎಫ್‌ಎಸ್‌ಬಿ ಆರೋಪಿಸಿದೆ.

ಗೆರ್ಸ್‌ಕೊವಿಚ್‌ ಅವರು ಶೀತಲ ಸಮರದ ನಂತರ ಗೂಢಚರ್ಯೆ ಆರೋಪದ ಮೇಲೆ ರಷ್ಯಾದಲ್ಲಿ ಬಂಧನಕ್ಕೆ ಒಳಗಾದ ಅಮೆರಿಕ ಸುದ್ದಿಸಂಸ್ಥೆಯ ಮೊದಲ ವರದಿಗಾರರಾಗಿದ್ದಾರೆ.

ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ವೇಳೆ ಮಾಸ್ಕೊ ಮತ್ತು ವಾಷಿಂಗ್ಟನ್ ನಡುವೆ ಸಂಬಂಧ ಹದಗೆಟ್ಟಿರುವಾಗ ‘ವಾಲ್‌ ಸ್ಟ್ರೀಟ್‌ ಜರ್ನಲ್‌’ನ ಪ್ರಮುಖ ವರದಿಗಾರನ ಬಂಧನದ ಬೆಳವಣಿಗೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT