ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನಿಗಳ ವಶದಲ್ಲಿ ರಷ್ಯಾದ ಶಸ್ತ್ರಾಸ್ತ್ರ: ರಕ್ಷಣಾ ಸಚಿವರ ಕಳವಳ

Last Updated 25 ಆಗಸ್ಟ್ 2021, 7:25 IST
ಅಕ್ಷರ ಗಾತ್ರ

ಮಾಸ್ಕೊ: ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ತಾಲಿಬಾನಿಗಳು ತಮ್ಮ ದೇಶಕ್ಕೆ ಸೇರಿದ ಬೃಹತ್ ಪ್ರಮಾಣದ ಯುದ್ಧ ವಿಮಾನಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವ ಸರ್ಗೈ ಶೊಯಿಗು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಯುದ್ಧಕ್ಕೆ ಬಳಸುವ 100ಕ್ಕೂ ಹೆಚ್ಚು ವಾಹನಗಳ ಜೊತೆಗೆ, ಹಲವಾರು ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

‘ಅಫ್ಗಾನಿಸ್ತಾನದ ನಿರಾಶ್ರಿತರ ಸಮಸ್ಯೆ ತೀವ್ರ ಕಳವಳಕ್ಕೆ ಕಾರಣವಾಗಿದೆ’ ಎಂದಿರುವ ಅವರು, ತಾಲಿಬಾನಿಗಳು, ದೇಶದಲ್ಲಿರುವ ಎಲ್ಲ ಗುಂಪುಗಳನ್ನು ಒಳಗೊಂಡಿರುವ ಸರ್ಕಾರವನ್ನು ರಚಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT