ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ಆ್ಯಪ್‌ಗೆ ದಂಡ ವಿಧಿಸಿದ ರಷ್ಯಾ

ಡೇಟಾ ಸಂಗ್ರಹ ಕಾನೂನು ಉಲ್ಲಂಘಿಸಿದ ಆರೋಪ
Last Updated 26 ಆಗಸ್ಟ್ 2021, 15:34 IST
ಅಕ್ಷರ ಗಾತ್ರ

ಮಾಸ್ಕೊ: ‘ಡೇಟಾ’ ಸಂಗ್ರಹ ಕಾನೂನು ಉಲ್ಲಂಘಿಸಿದ ಆರೋಪಕ್ಕಾಗಿ ಫೇಸ್‌ಬುಕ್‌, ಟ್ವಿಟರ್‌ ಮತ್ತು ವಾಟ್ಸ್‌ಆ್ಯಪ್‌ಗೆ ರಷ್ಯಾ ದಂಡ ವಿಧಿಸಿದೆ.

ಸ್ಥಳೀಯ ಸರ್ವರ್‌ನಲ್ಲಿ ಬಳಕೆದಾರರ ‘ಡೇಟಾ’ ಸಂಗ್ರಹಿಸಲು ವಿಫಲವಾಗಿರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ.

ಫೇಸ್‌ಬುಕ್‌ಗೆ 1.5 ಕೋಟಿ ರೂಬಲ್‌ (₹1.49 ಕೋಟಿ), ಟ್ವಿಟರ್‌ಗೆ 1.7 ಕೋಟಿ ರೂಬಲ್‌ (₹1.69 ಕೋಟಿ) ಮತ್ತು 40 ಲಕ್ಷ ರೂಬಲ್‌ (₹39.83 ಲಕ್ಷ) ದಂಡ ವಿಧಿಸಲಾಗಿದೆ. ಮಾಸ್ಕೊದ ಟಾಗನ್‌ಸ್ಕಿ ಜಿಲ್ಲಾ ನ್ಯಾಯಾಲಯ ಈ ದಂಡ ವಿಧಿಸಿದೆ.

2014ರಲ್ಲಿ ಈ ಕಾನೂನು ಜಾರಿಗೊಳಿಸಲಾಗಿತ್ತು. ರಷ್ಯಾದ ಬಳಕೆದಾರರ ವೈಯಕ್ತಿಕ ‘ಡೇಟಾ’ ಅನ್ನು ಸ್ಥಳೀಯ ಸರ್ವರ್‌ಗಳಲ್ಲಿ ಸಂಗ್ರಹಿಸಿಡುವುದನ್ನು ಈ ಕಾನೂನಿನ ಅನ್ವಯ ಕಡ್ಡಾಯಗೊಳಿಸಲಾಗಿದೆ.

ದೇಶದ ಕಾನೂನುಗಳನ್ನು ಪಾಶ್ಚಿಮಾತ್ಯ ಸಾಮಾಜಿಕ ಮಾಧ್ಯಮಗಳು ಉಲ್ಲಂಘಿಸುತ್ತಿವೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಇತ್ತೀಚೆಗೆ ದೂರಿದ್ದರು. ಈ ಹೇಳಿಕೆ ಬೆನ್ನಲ್ಲೇ ದಂಡ ವಿಧಿಸುವ ಕ್ರಮಕೈಗೊಳ್ಳಲಾಗಿದೆ.

ಕಾನೂನು ಉಲ್ಲಂಘಿಸಿದ್ದ ಆರೋಪಕ್ಕಾಗಿ ಟ್ವಿಟರ್‌ ಮತ್ತು ಫೇಸ್‌ಬುಕ್‌ಗೆ ಕಳೆದ ವರ್ಷವೂ ದಂಡ ವಿಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT