ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ಮೇಲಿನ ಆಕ್ರಮಣಕ್ಕೆ 100 ದಿನ: ರಷ್ಯಾ ಗುರಿ ಸಾಧನೆ

Last Updated 3 ಜೂನ್ 2022, 19:31 IST
ಅಕ್ಷರ ಗಾತ್ರ

ಮಾಸ್ಕೊ:ಪಾಶ್ಚಿಮಾತ್ಯ ಪರವಾದ ಒಲವು ಹೊಂದಿದ್ದ ನೆರೆಯ ದೇಶ ಉಕ್ರೇನ್‌ ಮೇಲೆ ವಿಶೇಷ ಸೇನಾ ಕಾರ್ಯಾಚರಣೆ ನಡೆಸಲು ಸೇನೆ ಕಳುಹಿಸಿದ ಮೇಲೆ ನೂರು ದಿನಗಳಲ್ಲಿ ರಷ್ಯಾ ಮಹತ್ವದ ಗುರಿಗಳನ್ನು ಸಾಧಿಸಿದ್ದು, ಕೆಲವು ಫಲಿತಾಂಶಗಳನ್ನು ಪಡೆದಿದೆ ಎಂದು ವ್ಲಾಡಿಮಿರ್‌ ಪುಟಿನ್ ಆಡಳಿ ಕಚೇರಿ ಕ್ರೆಮ್ಲಿನ್ ಶುಕ್ರವಾರ ಹೇಳಿದೆ.

ರಷ್ಯಾ ಪಡೆಗಳು ಉಕ್ರೇನಿನ ಶೇ 20ರಷ್ಟು ಭೂಪ್ರದೇಶದ ಮೇಲೆ ಹಿಡಿತ ಸಾಧಿಸಿರುವುದನ್ನು ಉಕ್ರೇನ್‌ ಅಧ್ಯಕ್ಷರು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಲುವಿವ್‌, ಹಾರ್ಕಿವ್‌ ಪ್ರದೇಶಗಳ
ಮೇಲೆ ರಷ್ಯಾ ಪಡೆಗಳ ಕ್ಷಿಪಣಿ, ಶೆಲ್‌ ದಾಳಿ ಮುಂದುವರಿದಿದೆ.

ಉಕ್ರೇನ್‌ನಲ್ಲಿ ಕೈಗೊಂಡಿರುವ ವಿಶೇಷ ಕಾರ್ಯಾಚರಣೆಗೆ 100 ದಿನಗಳು ತುಂಬಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೊವ್‌, ‘ನಾವು ಕೆಲವು ಫಲಿತಾಂಶಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಹೇಳಿದರು.

‘ರಷ್ಯಾ ಪರವಿರುವಡೊನೆಟ್‌ಸ್ಕ್‌ ಮತ್ತು ಲುಹಾನ್‌ಸ್ಕ್‌ ಗಣರಾಜ್ಯದ ಜನರನ್ನು ಕೀವ್‌ ಸೇನೆ ದೌರ್ಜನ್ಯದಿಂದ ರಕ್ಷಿಸಲು ಉಕ್ರೇನ್‌ಗೆ ರಷ್ಯಾ ತನ್ನ ಪಡೆಗಳನ್ನು ಕಳುಸಿದೆ.ಅವರ ರಕ್ಷಣೆಯನ್ನು ಖಾತ್ರಿಪಡಿಸುವ ದೃಷ್ಟಿಯಿಂದ, ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಫಲಿತಾಂಶಗಳೂ ಬಂದಿವೆ. ಉಕ್ರೇನ್‌ನ ನಾಜಿ ಪರ
ಸಶಸ್ತ್ರ ಪಡೆಗಳಿಂದ ಹಲವು ಪ್ರದೇಶಗಳನ್ನು ವಿಮೋಚನೆಗೊಳಿಸಲಾಗಿದೆ.
ಸೇನಾ ಕಾರ್ಯಾಚರಣೆಯು ಎಲ್ಲ ಗುರಿಗಳನ್ನು ಸಾಧಿಸುವವರೆಗೆ ಮುಂದುವರಿಯುತ್ತದೆ’ ಎಂದು ಪೆಸ್ಕೊವ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT