ಅಣ್ವಸ್ತ್ರ ಸಮರಾಭ್ಯಾಸ: ಖಂಡಾಂತರ ಕ್ಷಿಪಣಿ ಉಡಾಯಿಸಿದ ರಷ್ಯಾ

ಮಾಸ್ಕೊ: ಉಕ್ರೇನ್ ಡರ್ಟಿ ಬಾಂಬ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಭಾರತ ಮತ್ತು ಚೀನಾ ಬಳಿ ಆಧಾರರಹಿತ ಆರೋಪ ಮಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಬುಧವಾರ ಪರಮಾಣು ಸಾಮರ್ಥ್ಯದ ಪಡೆಗಳ ಸಮರಾಭ್ಯಾಸದ ಮೇಲ್ವಿಚಾರಣೆ ನಡೆಸಿದರು.
ಉಕ್ರೇನ್ ಮೇಲೆ ಎಂಟು ತಿಂಗಳಿಂದ ಆಕ್ರಮಣ ನಡೆಸುತ್ತಿರುವ ರಷ್ಯಾದ ಮತ್ತಷ್ಟು ಆಕ್ರಮಣಶೀಲತೆಗೆ ಇದು ಸಾಕ್ಷಿಯಾಗಿದೆ. ರಷ್ಯಾದ ಪಡೆಗಳು ನಡೆಸಿದ ಪರಮಾಣು ಸಮರಾಭ್ಯಾಸವನ್ನು ಅಧ್ಯಕ್ಷ ವ್ಲಾಡಿಮಮಿರ್ ಪುಟಿನ್ ನಿಯಂತ್ರಣ ಕೊಠಡಿಯಲ್ಲೇ ಕುಳಿತು ಮೇಲ್ವಿಚಾರಣೆ ನಡೆಸಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.
'ವ್ಲಾಡಿಮಿರ್ ಪುಟಿನ್ ಅವರ ನೇತೃತ್ವದಲ್ಲಿ,ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಸಮರಾಭ್ಯಾಸ ನಡೆಯಿತು. ಈ ಸಮಯದಲ್ಲಿ ಖಂಡಾಂತರ ಮತ್ತು ಕ್ರೂಸ್ ಕ್ಷಿಪಣಿಗಳ ಪ್ರಾಯೋಗಿಕ ಉಡಾವಣೆಗಳು ನಡೆದವು' ಎಂದು ಕ್ರೆಮ್ಲಿನ್ ಹೇಳಿಕೆಯಲ್ಲಿ ತಿಳಿಸಿದೆ.
ಆರ್ಕ್ಟಿಕ್‌ನಲ್ಲಿನ ಬ್ಯಾರೆಂಟ್ಸ್ ಸಮುದ್ರದಿಂದ ಸಿನೆವಾ ಖಂಡಾಂತರ ಕ್ಷಿಪಣಿಯನ್ನು ಉಡಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಜಲಾಂತರ್ಗಾಮಿ ಸಿಬ್ಬಂದಿಯ ತುಣುಕನ್ನು ರಷ್ಯಾದ ಸರ್ಕಾರಿ ಮಾಧ್ಯಮವು ಪ್ರಸಾರ ಮಾಡಿದೆ.
ಕಮ್ಚಟ್ಕಾ ದ್ವೀಪದಿಂದ ಪರೀಕ್ಷಾರ್ಥ ಕ್ಷಿಪಣಿಗಳ ಉಡಾವಣೆ ಸಹ ತಾಲೀಮಿನ ಭಾಗವಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.