ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಟಿಕ್ ಸಾಗರ ರಾಷ್ಟ್ರಗಳ ಮಂಡಳಿಯಿಂದ ಹೊರ ನಡೆದ ರಷ್ಯಾ

Last Updated 17 ಮೇ 2022, 16:30 IST
ಅಕ್ಷರ ಗಾತ್ರ

ಮಾಸ್ಕೊ: ಬಾಲ್ಟಿಕ್‌ ಸಾಗರ ರಾಷ್ಟ್ರಗಳ ಮಂಡಳಿಯನ್ನು (ಸಿಬಿಎಸ್‌ಎಸ್‌) ತೊರೆಯುತ್ತಿರುವುದಾಗಿ ರಷ್ಯಾ ಮಂಗಳವಾರ ಹೇಳಿದೆ.

ಉಕ್ರೇನ್‌ ಮೇಲೆರಷ್ಯಾ ದಾಳಿ ಆರಂಭಿಸಿದ ನಂತರ ಪಶ್ಚಿಮ ರಾಷ್ಟ್ರಗಳೊಂದಿಗಿನ ಅದರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ, ರಷ್ಯಾದಿಂದ ಈ ನಿರ್ಧಾರ ಹೊರಬಿದ್ದಿದೆ.

‘ರಷ್ಯಾ ವಿರೋಧಿ ನೀತಿಯನ್ನು ಅನುಸರಿಸಲು ಈ ಮಂಡಳಿಯನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳಲಾಗಿದೆ. ರಷ್ಯಾ ಬಗ್ಗೆ ಇತರ ದೇಶಗಳಲ್ಲಿ ಭಯ ಹುಟ್ಟಿಸುವುದು ಹಾಗೂ ಸುಳ್ಳು ಮಾಹಿತಿ ಪ್ರಸಾರ ಮಾಡಲಾಗುತ್ತಿದೆ’ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ಹೇಳಿದೆ.

‘ಮೇ 25ರಂದು ನಾರ್ವೆಯಲ್ಲಿ ಆಯೋಜಿಸಲಾಗಿರುವ ಮಂಡಳಿಯ ಸಭೆಯಿಂದ ರಷ್ಯಾವನ್ನು ಹೊರಗಿಡಲಾಗಿದೆ. ಬಾಲ್ಟಿಕ್‌ ಪ್ರದೇಶದಿಂದ ದೇಶವನ್ನು ಹೊರಗಿಡುವ ಇಂಥ ಯತ್ನಗಳು ವಿಫಲವಾಗಲಿವೆ’ ಎಂದೂ ಸಚಿವಾಲಯ ಟೀಕಿಸಿದೆ.

ಪ್ರಾದೇಶಿಕ ಸಹಕಾರ ಉದ್ದೇಶದಿಂದ ರಚಿಸಲಾಗಿರುವ ಈ ಮಂಡಳಿಯಲ್ಲಿ 11 ರಾಷ್ಟ್ರಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT