ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ಗೆ 210 ಸೈನಿಕರ ಶವ ಹಸ್ತಾಂತರಿಸಿದ ರಷ್ಯಾ

Last Updated 8 ಜೂನ್ 2022, 15:34 IST
ಅಕ್ಷರ ಗಾತ್ರ

ಕೀವ್‌: ಉಕ್ರೇನಿನ ಬಂದರು ನಗರಮರಿಯುಪೊಲ್‌ನಲ್ಲಿನ ದೈತ್ಯ ಉಕ್ಕಿನ ಸ್ಥಾವರ ಅಜೋವ್‌ಸ್ಟಾಲ್‌ ರಕ್ಷಿಸಲು ರಷ್ಯಾ ಪಡೆಗಳ ವಿರುದ್ಧ ಹೋರಾಡಿ ಮಡಿದ 210 ಉಕ್ರೇನ್‌ ಯೋಧರ ಶವಗಳನ್ನು ರಷ್ಯಾ ಈವರೆಗೆ ಉಕ್ರೇನ್‌ಗೆ ಹಸ್ತಾಂತರಿಸಿದೆ.

ನಾಶವಾದ ಈ ಬಂದರು ನಗರ ಈಗ ರಷ್ಯಾ ನಿಯಂತ್ರಣದಲ್ಲಿದೆ. ಸ್ಥಾವರದ ಅವಶೇಷಗಡಿ ಇನ್ನೂ ಎಷ್ಟು ಶವಗಳಿರಬಹುದೆಂಬುದು ನಿರ್ದಿಷ್ಟವಾಗಿ ತಿಳಿದುಬಂದಿಲ್ಲ. ಆದರೆ, ಒಂದು ವಾರದಿಂದ ಯೋಧರ ಶವಗಳನ್ನು ರಷ್ಯಾ ಹಸ್ತಾಂತರಿಸುತ್ತಿದೆ ಎಂದು ಉಕ್ರೇನ್‌ ಸೇನೆಯ ಗಪ್ತದಳ ಹೇಳಿದೆ.

ಸೆವೆರೊಡೊನೆಟ್‌ಸ್ಕ್‌, ಲುಹಾನ್‌ಸ್ಕ್‌ನ ಸಂಪೂರ್ಣ ನಿಯಂತ್ರಣ ಸಾಧಿಸಲು ರಷ್ಯಾ ಭೀಕರ ದಾಳಿ ಮುಂದುವರಿಸಿದೆ. ಉಕ್ರೇನ್‌ ಪಡೆಗಳೂ ತೀವ್ರ ಪ್ರತಿರೋಧ ತೋರುತ್ತಿವೆ. ಹಾರ್ಕಿವ್‌ನಲ್ಲಿ ರಷ್ಯಾದ ಶೆಲ್‌ ದಾಳಿಗೆ ಐವರು ನಾಗರಿಕರು ಮೃತಪಟ್ಟಿದ್ದಾರೆ. ಬಾಖ್‌ಮಟ್‌ ಮೇಲೆ ರಷ್ಯಾ ನಡೆಸಿದ ವಾಯು ದಾಳಿಗೆ ಹಲವು ಶಾಲೆಗಳು ಮತ್ತು ಜನವಸತಿ ಕಟ್ಟಗಳು ಧ್ವಂಸಗೊಂಡಿವೆ ಎಂದು ಉಕ್ರೇನ್‌ ಅಧಿಕಾರಿಗಳು ಹೇಳಿದ್ದಾರೆ.

‘ರಷ್ಯಾ ಪಡೆಗಳು ಲುಹಾನ್‌ಸ್ಕ್‌ನ ಶೇ 97ರಷ್ಟು ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಿವೆ. ಡೊನೆಟ್‌ಸ್ಕ್‌ ಮತ್ತು ಲುಹಾನ್‌ಸ್ಕ್‌ ಒಳಗೊಂಡ ಕೈಗಾರಿಕಾ ನಗರ ಡಾನ್‌ಬಾಸ್‌ ಅನ್ನು ಪಡೆಗಳು ಸಂಪೂರ್ಣ ವಶಪಡಿಸಿಕೊಳ್ಳುವ ಗುರಿ ಸಾಧಿಸುವ ಸನಿಹದಲ್ಲಿವೆ’ ಎಂದು ರಷ್ಯಾದ ರಕ್ಷಣಾ ಸಚಿವ ಸೆರ್ಗೈ ಶೋಯಿಗು ತಿಳಿಸಿದ್ದಾರೆ.

‘ಆಕ್ರಮಣ ಆರಂಭವಾದಾಗಿನಿಂದ ಈವರೆಗೆರಷ್ಯಾದ 31,500 ಸೈನಿಕರನ್ನು ಹತ್ಯೆಗೈದಿದ್ದು, ಯುದ್ಧವಿಮಾನ, ಹೆಲಿಕಾಪ್ಟರ್‌ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ನಾಶಪಡಿಸಿ, ರಷ್ಯಾ ಸೇನೆಗೆ ಭಾರಿ ನಷ್ಟ ಮಾಡಿದ್ದೇವೆ’ ಎಂದುಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಬುಧವಾರ ತಿಳಿಸಿದ್ದಾರೆ.

‘ರಷ್ಯಾದ ಆಕ್ರಮಣದಿಂದ ಧ್ವಂಸಗೊಂಡಿರುವ ನಗರಗಳು, ಮೂಲಸೌಕರ್ಯಗಳ ಮರುನಿರ್ಮಾಣ ಹಾಗೂ ಸೇನೆಯ ಮರು ಸಂಘಟನೆಗೆ ನಮ್ಮ ಸರ್ಕಾರ ದೇಣಿಗೆ ಸಂಗ್ರಹಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT