ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ದೇಶಗಳು ಉಕ್ರೇನ್‌ಗೆ ನೀಡಿರುವ ಶಸ್ತ್ರಾಸ್ತ್ರ ಗುರಿಯಾಗಿಸಿ ದಾಳಿ: ರಷ್ಯಾ

Last Updated 12 ಮಾರ್ಚ್ 2022, 14:13 IST
ಅಕ್ಷರ ಗಾತ್ರ

ಮಾಸ್ಕೊ: ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ಹೇರಿರುವ ನಿರ್ಬಂಧದ ಹೊರತಾಗಿಯೂ ಉಕ್ರೇನ್ ಮೇಲಿನ ದಾಳಿಯನ್ನು ರಷ್ಯಾಮುಂದುವರಿಸಿದೆ. ಈಗ, ಉಕ್ರೇನ್‌ಗೆ ಪೂರೈಕೆಯಾಗುವ ಪಾಶ್ಚಿಮಾತ್ಯ ದೇಶಗಳ ಶಸ್ತ್ರಾಸ್ತ್ರಗಳು ತನ್ನ ಸೇನೆಯ ದಾಳಿಗೆ ತುತ್ತಾಗಬಹುದು ಎಂದು ರಷ್ಯಾ ಎಚ್ಚರಿಕೆ ನೀಡಿದೆ.

ಸರ್ಕಾರಿ ಒಡೆತನ ಟಿವಿ ಚಾನೆಲ್‌ ಜೊತೆ ಶನಿವಾರ ಮಾತನಾಡಿದ ರಷ್ಯಾ ವಿದೇಶಾಂಗ ಸಚಿವಾಲಯದ ಉಪ ಸಚಿವ ಸೆರ್ಗಿ ರ‍್ಯಾಬ್‌ಕೋವ್‌ ಅವರು, ‘ಪಾಶ್ಚಿಮಾತ್ಯ ದೇಶಗಳಿಂದ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳ ಪೂರೈಕೆಯು ಅಪಾಯಕಾರಿ ನಡೆ ಅಷ್ಟೇ ಅಲ್ಲ. ಈ ಶಸ್ತ್ರಾಸ್ತ್ರಗಳು ರಷ್ಯಾದ ಗುರಿಯಾಗಲಿವೆ ಎಂಬ ಎಚ್ಚರಿಕೆಯನ್ನು ಅಮೆರಿಕಕ್ಕೆ ನೀಡಿದ್ದೇವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT