ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ಗೆ ರಷ್ಯಾದಿಂದ ಶೇ.100ರಷ್ಟು ಪರಿಣಾಮಕಾರಿ ಲಸಿಕೆ: ವರದಿ

ಸ್ಪೂಟ್ನಿಕ್‌ ನಂತರ ಮತ್ತೊಂದು ಲಸಿಕೆ ಬಿಡುಗಡೆ
Last Updated 19 ಜನವರಿ 2021, 11:53 IST
ಅಕ್ಷರ ಗಾತ್ರ

ಮಾಸ್ಕೊ: ಕೋವಿಡ್‌ಗೆ ರಷ್ಯಾ ಅಭಿವೃದ್ಧಿಪಡಿಸಿರುವ ಎರಡನೇ ಲಸಿಕೆಯು, ಶೇ. 100ರಷ್ಟು ಪರಿಣಾಮಕಾರಿಯಾಗಿದೆ ಎಂದು ಅಲ್ಲಿನ ಗ್ರಾಹಕ ಆರೋಗ್ಯ ವಿಚಕ್ಷಣಾ ಸಂಸ್ಥೆ 'ರೋಸ್ಪೊಟ್ರೆಬ್ನಾಡ್ಜೋರ್' ಹೇಳಿದೆ. ಈ ಕುರಿತು ಸುದ್ದಿ ಸಂಸ್ಥೆ 'ಟಿಎಎಸ್‌ಎಸ್‌' ವರದಿ ಮಾಡಿದೆ.

ಸೈಬೀರಿಯಾದ 'ವೆಕ್ಟರ್ ಇನ್‌ಸ್ಟಿಟ್ಯೂಟ್‌' ಅಭಿವೃದ್ಧಿಪಡಿಸುತ್ತಿರುವ 'ಎಪಿವ್ಯಾಕ್‌ಕೊರೊನಾ'ದ ಸಾಮೂಹಿಕ ಪ್ರಯೋಗಗವನ್ನು ರಷ್ಯಾ ನವೆಂಬರ್‌ನಲ್ಲಿ ಪ್ರಾರಂಭಿಸಿತ್ತು.

ಇದಕ್ಕೂ ಮೊದಲು ಸ್ಪೂಟ್ನಿಕ್‌-ವಿ ಎಂಬ ಲಸಿಕೆ ಬಿಡುಗಡೆ ಮಾಡಿದ್ದ ರಷ್ಯಾ, ಇದು ಶೇ. 92ರಷ್ಟು ಪರಿಣಾಮಕಾರಿ ಎಂದು ಹೇಳಿತ್ತು. ಸದ್ಯ ಸ್ಪೂಟ್ನಿಕ್‌-ವಿ ರಷ್ಯಾ ಮತ್ತು ಪ್ಯಾಲೆಸ್ತೀನ್‌ನಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT