ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನ: 500ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಿರುವ ರಷ್ಯಾ

Last Updated 25 ಆಗಸ್ಟ್ 2021, 6:39 IST
ಅಕ್ಷರ ಗಾತ್ರ

ಮಾಸ್ಕೊ: ಅಫ್ಗಾನಿಸ್ತಾನದಲ್ಲಿರುವ 500ಕ್ಕೂ ಅಧಿಕ ರಷ್ಯಾದಪ್ರಜೆಗಳನ್ನು ಸೇನಾಪಡೆಯ ನಾಲ್ಕು ಸರಕು ಸಾಗಣೆ ವಿಮಾನಗಳ ಮೂಲಕ ಸ್ಥಳಾಂತರಿಸಲಾಗುವುದು ಎಂದು ರಷ್ಯಾದ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ಇಂಟರ್‌ಫಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘ರಷ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಕ್ಷಣಾ ಸಚಿವರು, ಸೇನಾಪಡೆಯ ಜನರಲ್ ಸರ್ಗೈ ಸೊಯಿಗು ಅವರ ಆದೇಶದ ಮೇರೆಗೆ ಆಗಸ್ಟ್ 25ರಂದು ಇಸ್ಲಾಮಿಕ್‌ ರಿಪಬ್ಲಿಕ್ ಆಫ್‌ ಅಫ್ಗಾನಿಸ್ತಾನದಿಂದ ರಷ್ಯ, ಉಕ್ರೇನ್‌, ಸಿಎಸ್‌ಟಿಒ ಸದಸ್ಯ ರಾಷ್ಟ್ರಗಳಾದ ಬೆಲಾರಸ್‌, ಕಿರ್ಗಿಸ್ತಾನ್, ತಜಕಿಸ್ತಾನ್‌ ಮತ್ತು ಉಜ್ಬೇಕಿಸ್ತಾನದ 500ಕ್ಕೂ ಅಧಿಕ ಪ್ರಜೆಗಳನ್ನು ಸೇನಾಪಡೆಯ ಸರಕು ಸಾಗಣೆ ವಿಮಾನಗಳಲ್ಲಿ ಸ್ಥಳಾಂತರಿಸಲಾಗುವುದು‌’ ಎಂಬ ರಕ್ಷಣಾ ಸಚಿವಾಲಯದ ಆದೇಶವನ್ನು ವರೆದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT