ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ–ಉಕ್ರೇನ್‌ ಬಿಕ್ಕಟ್ಟು: ಸೇನಾ ಕಾರ್ಯಾಚರಣೆ ಇಲ್ಲ ಎಂದ ನ್ಯಾಟೊ

Last Updated 25 ಫೆಬ್ರುವರಿ 2022, 2:02 IST
ಅಕ್ಷರ ಗಾತ್ರ

ಬ್ರಸೆಲ್ಸ್‌:ಉಕ್ರೇನ್‌ ಮತ್ತು ರಷ್ಯಾ ಸಮೀಪದಲ್ಲಿರುವ ಮಿತ್ರ ದೇಶಗಳಲ್ಲಿನ ಭೂ, ಸಾಗರ ಮತ್ತು ವಾಯು ಪ್ರದೇಶ ಭದ್ರತೆಯನ್ನು ಹೆಚ್ಚಿಸಲು ನ್ಯಾಟೊ ನಿರ್ಧರಿಸಿದೆ. ‘ಯಾವುದೇ ರೀತಿಯ ಪರಿಸ್ಥಿತಿಗೆ ತಕ್ಕ ಪ್ರತಿಕ್ರಿಯೆ ನೀಡಲು ಸಜ್ಜಾಗಿದ್ದೇವೆ’ ಎಂದು ನ್ಯಾಟೊ ರಾಯಭಾರಿಗಳು ಗುರುವಾರ ಹೇಳಿದ್ದಾರೆ.

ನ್ಯಾಟೊದ 30 ಸದಸ್ಯ ರಾಷ್ಟ್ರಗಳ ಪೈಕಿ ಹಲವು ದೇಶಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ಮತ್ತು ಇತರ ಸೇನಾ ಸಲಕರಣೆಗಳ ಪೂರೈಕೆ ಮಾಡುತ್ತಿವೆ. ಆದರೆ, ನ್ಯಾಟೊ ಮೂಲಕ ಯಾವುದೇ ಪೂರೈಕೆ ಇಲ್ಲ. ಉಕ್ರೇನ್‌ಗೆ ಬೆಂಬಲವಾಗಿ ಸೇನಾ ಕಾರ್ಯಾಚರಣೆ ನಡೆಸುವ ಉದ್ದೇಶವೂ ಇಲ್ಲ ಎಂದು ನ್ಯಾಟೊ ಹೇಳಿದೆ.

ಉಕ್ರೇನ್‌ ಮತ್ತು ರಷ್ಯಾ ಸಮೀಪದಲ್ಲಿರುವ ನ್ಯಾಟೊ ಸದಸ್ಯ ರಾಷ್ಟ್ರಗಳೆಂದರೆ, ಈಸ್ಟೋನಿಯಾ, ಲಾತ್ವಿಯಾ, ಲಿಥುವೇನಿಯಾ ಮತ್ತು ಪೋಲೆಂಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT