ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್ 2ರಂದು ರಷ್ಯಾ–ಉಕ್ರೇನ್‌ ಎರಡನೇ ಸುತ್ತಿನ ಚರ್ಚೆ: ರಷ್ಯಾ ಸುದ್ದಿಸಂಸ್ಥೆ

Last Updated 1 ಮಾರ್ಚ್ 2022, 15:47 IST
ಅಕ್ಷರ ಗಾತ್ರ

ಮಾಸ್ಕೊ: ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶ ನೀಡಿ ಇಂದಿಗೆ ಆರು ದಿನ ಕಳೆದಿದೆ. ಈ ಬೆನ್ನಲ್ಲೇ ಯುದ್ಧಕ್ಕೆ ವಿರಾಮ ನೀಡುವ ನಿಟ್ಟಿನಲ್ಲಿ ಎರಡನೇ ಸುತ್ತಿನ ರಷ್ಯಾ-ಉಕ್ರೇನ್ ಮಾತುಕತೆಯನ್ನು ಮಾರ್ಚ್ 2 ರಂದು ನಿಗದಿ ಮಾಡಲಾಗಿದೆ ಎಂದು ರಷ್ಯಾದ ಟಿಎಎಸ್ಎಸ್ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.

ರಷ್ಯಾದ ಕಡೆಯ ಮೂಲವನ್ನು ಉಲ್ಲೇಖಿಸಿ ವರದಿ ಮಾಡಿರುವ ಸುದ್ದಿಸಂಸ್ಥೆ, ಮಾ.2 ರಂದು ಉಭಯ ದೇಶಗಳು ಮಾತುಕತೆ ನಡೆಸಲಿವೆ ಎಂದಿದೆ.

ಯುದ್ಧಕ್ಕೆ ವಿರಾಮ ನೀಡುವ ನಿಟ್ಟಿನಲ್ಲಿ ಸೋಮವಾರ (ಫೆ.28) ಉಕ್ರೇನ್‌ ಮತ್ತು ರಷ್ಯಾ ನಡುವೆ ಮೊದಲ ಸುತ್ತಿನ ಮಾತುಕತೆ ನಡೆದಿತ್ತು. ಆದರೆ ಫಲಪ್ರದವಾಗಿರಲಿಲ್ಲ. ಶೀಘ್ರವೇ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಲಾಗಿತ್ತು. ಈ ಬೆನ್ನಲ್ಲೇ ರಷ್ಯಾ ಸೇನೆ ಉಕ್ರೇನ್ ನಗರಗಳ ಮೇಲೆ ದಾಳಿಯನ್ನು ಮುಂದುವರಿಸಿದೆ.

ದಾಳಿಯಲ್ಲಿ ಉಕ್ರೇನ್‌ನ ನೂರಾರು ನಾಗರಿಕರು ಹತ್ಯೆಯಾಗಿದ್ದಾರೆ ಎಂದಿರುವ ಉಕ್ರೇನ್, 'ರಷ್ಯಾದ 5,710 ಸೈನಿಕರನ್ನು ಹತ್ಯೆ ಮಾಡಲಾಗಿದೆ ಮತ್ತು 198 ಟ್ಯಾಂಕ್‌ಗಳು, 29 ಫೈಟರ್ ವಿಮಾನಗಳು, 29 ಹೆಲಿಕಾಪ್ಟರ್‌ಗಳನ್ನು ಉಕ್ರೇನ್ ಪಡೆಗಳು ನಾಶ ಮಾಡಿವೆ' ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT