ಭಾನುವಾರ, ಜೂನ್ 26, 2022
22 °C

ಉಕ್ರೇನ್ ಮೇಲೆ ದಾಳಿ: ಅಮೆರಿಕ, ಕೆನಡಾದಲ್ಲಿ ರಷ್ಯಾ ಮೂಲದ ಮದ್ಯ ಮಾರಾಟ ನಿಷೇಧ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಉಕ್ರೇನ್‌ ಮೇಲೆ ರಷ್ಯಾ ಸೇನೆ ಆಕ್ರಮಣ ಮುಂದುವರಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕ ಮತ್ತು ಕೆನಡಾ, ರಷ್ಯಾ ಉತ್ಪಾದಿತ ಮದ್ಯ ಮಾರಾಟವನ್ನು ನಿರ್ಬಂಧಿಸಿವೆ.

ಸರ್ಕಾರದ ವೈನ್‌ ಮತ್ತು ಮದ್ಯ ಮಾರಾಟ ಕೇಂದ್ರಗಳಲ್ಲಿ ರಷ್ಯನ್‌ ಬ್ರ್ಯಾಂಡ್‌ನ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌ ರಾಜ್ಯದ ಗವರ್ನರ್ ಕ್ರಿಸ್ ಸುನುನು ಘೊಷಿಸಿದ್ದಾರೆ. ಒಹಿಯೊ ರಾಜ್ಯದಲ್ಲಿಯೂ ಇದೇ ರೀತಿಯ ಆದೇಶ ಹೊರಡಿಸಲಾಗಿದೆ.

ಕೆನಡಾದ ಮನಿಟೊಬ, ನ್ಯೂಫೌಂಡ್‌ಲ್ಯಾಂಡ್, ಒಂಟಾರಿಯೊ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿನ ಮದ್ಯ ಮಾರಾಟ ಮಳಿಗೆಗಳಿಂದ ರಷ್ಯನ್ ಬ್ಯಾಂಡ್‌ನ ಮದ್ಯ ಮತ್ತು ಇತರ ಪಾನೀಯಗಳನ್ನು ತೆರವುಗೊಳಿಸಲಾಗಿದೆ.

ಕೆನಡಾದಲ್ಲಿ ವಿಸ್ಕಿಯನ್ನು ಬಿಟ್ಟರೆ ಅತಿಹೆಚ್ಚು ಸೇವಿಸುವ ಮದ್ಯ ವೋಡ್ಕಾ. ಇದು ರಷ್ಯಾ ಮೂಲದ್ದಾಗಿದೆ.

ಸದ್ಯ ಅಮೆರಿಕ ಮತ್ತು ಕೆನಡಾ ಕೈಗೊಂಡಿರುವ ನಿರ್ಧಾರಗಳು ರಷ್ಯಾದ ಮದ್ಯ ತಯಾರಿಕಾ ಕಂಪೆನಿಗಳ ಆದಾಯದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು