ಕೇಂದ್ರೀಯ ಏಷ್ಯಾದಲ್ಲಿ ಭದ್ರತೆಗೆ ಅಪಾಯ–ತಾಲಿಬಾನ್‌ಗೆ ರಷ್ಯಾ ಎಚ್ಚರಿಕೆ

ಮಾಸ್ಕೊ: ಕೇಂದ್ರೀಯ ಏಷ್ಯಾ ಭಾಗದಲ್ಲಿನ ರಷ್ಯಾದ ಮಿತ್ರ ರಾಷ್ಟ್ರಗಳ ಭದ್ರತೆಗೆ ತಾಲಿಬಾನ್ ಯಾವುದೇ ಅಪಾಯ ತಂದೊಡ್ಡಿದರೆ ಭಾರಿ ಸಾವು ನೋವಿಗೆ ಕಾರಣವಾಗಬಹುದು ಎಂದು ರಷ್ಯಾ ಎಚ್ಚರಿಕೆ ನೀಡಿದೆ.
ರಷ್ಯಾದ ವಿದೇಶಾಂಗ ಸಚಿವಾಲಯವು ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದೆ ಎಂದು ಆರ್‌ಐಎ ಸುದ್ದಿಸಂಸ್ಥೆ ವರದಿ ಮಾಡಿದೆ.
ತಾಲಿಬಾನ್ ನಿಯೋಗವೊಂದು ಕಳೆದ ವಾರ ಮಾಸ್ಕೊದಲ್ಲಿ ವಿದೇಶಾಂಗ ಸಚಿವಾಲಯವನ್ನು ಭೇಟಿ ಮಾಡಿತ್ತು ಹಾಗೂ ರಷ್ಯಾದ ಮಿತ್ರ ರಾಷ್ಟ್ರಗಳ ಮೇಲೆ ದಾಳಿ ನಡೆಸುವ ವೇದಿಕೆಯಾಗಿ ಅಫ್ಗಾನಿಸ್ತಾನವನ್ನು ಬಳಸಲು ಬಿಡುವುದಿಲ್ಲ ಎಂದು ಭರವಸೆ ನೀಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.