ಶನಿವಾರ, ಆಗಸ್ಟ್ 13, 2022
26 °C

ಉಕ್ರೇನ್ ಮಕ್ಕಳಿಗಾಗಿ ನೊಬೆಲ್ ಪ್ರಶಸ್ತಿ ಮಾರಾಟಕ್ಕಿಟ್ಟ ರಷ್ಯಾ ಪತ್ರಕರ್ತ

ಎಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್: ರಷ್ಯಾದ ಪತ್ರಕರ್ತ ಡಿಮಿಟ್ರಿ ಮುರಾಟೊವ್ ಅವರು ತಮ್ಮ ನೊಬೆಲ್ ಪುರಸ್ಕಾರವನ್ನು ಹರಾಜಿಗೆ ಇಟ್ಟಿದ್ದಾರೆ. ಇದರಿಂದ ಬರುವ ಎಲ್ಲ ಹಣವನ್ನು ಉಕ್ರೇನ್ ಮೇಲಿನ ರಷ್ಯಾ ದಾಳಿಯಿಂದ ನಿರಾಶ್ರಿತರಾಗಿರುವ ಮಕ್ಕಳ ಸಹಾಯ ಕೈಗೊಳ್ಳುವ ಯುನಿಸೆಫ್‌ಗೆ ಸಮರ್ಪಿಸಲಾಗುತ್ತದೆ. 

ಯುದ್ಧದಿಂದ ನಿರಾಶ್ರಿತರ ಮಕ್ಕಳ ಭವಿಷ್ಯಕ್ಕಾಗಿ ನೆರವಾಗುವ ನಿಟ್ಟಿನಲ್ಲಿ ಮುರಾಟೊವ್ ಈಗಾಗಲೇ ₹3.89 ಕೋಟಿಯನ್ನು ದಾನವಾಗಿ ನೀಡಿದ್ದಾರೆ. ಆದಾಗ್ಯೂ, ತಮ್ಮ ನೊಬೆಲ್ ಪುರಸ್ಕಾರವನ್ನೇ ಉಕ್ರೇನ್ ಮಕ್ಕಳಿಗಾಗಿ ಹರಾಜಿಗೆ ಇಟ್ಟಿದ್ದಾರೆ. ಈ ಮೂಲಕ ಇತರ ದಾನಿಗಳು ಉಕ್ರೇನ್ ಮಕ್ಕಳ ಭವಿಷ್ಯಕ್ಕಾಗಿ ನೆರವಾಗಲು ಉತ್ತೇಜನ ನೀಡಿದಂತಾಗಿದೆ. 

ಕಳೆದ ವರ್ಷ ಮೊರಾಟೊವ್ ಮತ್ತು ಫಿಲಿಪ್ಪೀನ್ಸ್‌ ಮೂಲದ ಪತ್ರಕರ್ತ ಮರಿಯಾ ರೆಸ್ಸಾ ಅವರು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಪಾತ್ರರಾಗಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು