ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ: 28 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ನಾಪತ್ತೆ

ಸಂಪರ್ಕ ಕಡಿತ
Last Updated 6 ಜುಲೈ 2021, 6:09 IST
ಅಕ್ಷರ ಗಾತ್ರ

ಮಾಸ್ಕೊ: ಎಎನ್‌–26 ವಿಮಾನವೊಂದು ರಷ್ಯಾದ ಪೂರ್ವಭಾಗದಿಂದ ಮಂಗಳವಾರ ನಾಪತ್ತೆಯಾಗಿದ್ದು ಅದರಲ್ಲಿ 28 ಮಂದಿ ಪ್ರಯಾಣಿಕರಿದ್ದರು ಎಂದು ಪ್ರಾದೇಶಿಕ ಅಧಿಕಾರಿಗಳ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ವಿಮಾನವು ಭೂ ಸ್ಪರ್ಶ ಮಾಡುವ ಪ್ರಯತ್ನದಲ್ಲಿದ್ದಾಗ ವಾಯು ಸಂಚಾರ ನಿಯಂತ್ರಣ ವಿಭಾಗದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪೆಟ್ರೊಪವ್ಲೊವಸ್ಕ್‌– ಕಮ್ಚಟಾಸ್ಕೈನಿಂದ ಕಾಮ್ಚಾಟ್ಸ್ಕಿಯಲ್ಲಿರುವ ಪಲಾನಾಗೆ ಹೊರಟಿದ್ದ ವಿಮಾನ ನಾಪತ್ತೆಯಾಗಿದೆ ಎಂದು ಇಂಟರ್ಫ್ಯಾಕ್ಸ್ ಮತ್ತು ಆರ್‌ಐಎ ನೊವೊಸ್ಟಿ ಸುದ್ದಿ ಸಂಸ್ಥೆಗಳು ತುರ್ತು ಸಚಿವಾಲಯದ ಮಾಹಿತಿಯನ್ನು ಉಲ್ಲೇಖಿಸಿ ವರದಿ ಮಾಡಿವೆ.

ಇದನ್ನೂ ಓದಿ–ಫಿಲಿಪ್ಪಿನ್ಸ್‌: ಸೇನಾ ವಿಮಾನ ಅಪಘಾತ, 45 ಮಂದಿ ಸಾವು | Prajavani

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT