ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀವ್‌ನ ಅಪಾರ್ಟ್‌ಮೆಂಟ್‌ ಮೇಲೆ ಅಮಾನವೀಯ ದಾಳಿ: ಚಿತ್ರ ಹಂಚಿಕೊಂಡ ಉಕ್ರೇನ್‌ ಸಚಿವ

Last Updated 26 ಫೆಬ್ರುವರಿ 2022, 10:40 IST
ಅಕ್ಷರ ಗಾತ್ರ

ಕೀವ್‌: ರಷ್ಯಾವನ್ನು ಜಗತ್ತಿನಿಂದ ಪ್ರತ್ಯೇಕಿಸಬೇಕೆಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಶನಿವಾರ ಮನವಿ ಮಾಡಿಕೊಂಡಿದ್ದಾರೆ.‌

ಉಕ್ರೇನ್‌ ರಾಜಧಾನಿ ಕೀವ್‌ನ ಅಪಾರ್ಟ್‌ಮೆಂಟ್‌ವೊಂದರ ಮೇಲೆ ರಷ್ಯಾವು ಕ್ಷಿಪಣಿ ದಾಳಿ ನಡೆಸಿರುವ ಚಿತ್ರವೊಂದನ್ನು ಕುಲೆಬಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೀವ್‌, ನಮ್ಮ ಭವ್ಯವಾದ, ಶಾಂತಿಯುತ ನಗರವಾಗಿದೆ. ರಷ್ಯಾದ ಪಡೆಗಳು, ಕ್ಷಿಪಣಿಗಳ ದಾಳಿಯ ಅಡಿಯಲ್ಲಿ ಮತ್ತೊಂದು ರಾತ್ರಿ ಬದುಕುಳಿದಿದೆ. ರಷ್ಯಾದ ಪಡೆಗಳು ಕೀವ್‌ನಲ್ಲಿರುವ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿವೆ’ ಎಂದು ಹೇಳಿದ್ದಾರೆ.

‘ರಷ್ಯಾವನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿ, ರಾಯಭಾರಿಗಳನ್ನು ಹೊರಹಾಕಿ, ತೈಲ ಆಮದಿಗೆ ನಿರ್ಬಂಧ ಹೇರಿ, ಅದರ ಆರ್ಥಿಕತೆಯನ್ನು ನಾಶಮಾಡಿ. ರಷ್ಯಾದ ಯುದ್ಧ ಅಪರಾಧಿಗಳನ್ನು ತಡೆಯಿರಿ ಎಂಬುದಾಗಿ ನಾನು ಜಗತ್ತಿಗೆ ಒತ್ತಾಯಿಸುತ್ತೇನೆ’ ಎಂದು ಕುಲೆಬಾ ತಿಳಿಸಿದ್ದಾರೆ.

ಓದಿ...

ರಷ್ಯಾ ದಾಳಿ ಮಾಡಿದಾಗಿನಿಂದ 137 ಜನರು ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ ಹೇಳಿಕೊಂಡಿದೆ. ಸುಮಾರು ಒಂದು ಲಕ್ಷ ಜನರು ನಿರಾಶ್ರಿತರಾಗಿದ್ದಾರೆ.

ಉಕ್ರೇನ್‌ನ 74 ಸೇನಾ ನೆಲೆಗಳನ್ನು ನಾಶ ಮಾಡಲಾಗಿದೆ. ಅದರಲ್ಲಿ 11 ವಾಯುನೆಲೆಗಳೂ ಸೇರಿವೆ ಎಂದು ರಷ್ಯಾ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT