ಶುಕ್ರವಾರ, ಜುಲೈ 1, 2022
22 °C

ರಷ್ಯಾ ಪಡೆಗಳಿಂದ ಉಕ್ರೇನ್‌ನ ಮತ್ತೊಬ್ಬ ಮೇಯರ್‌ ಅಪಹರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಕ್ರೇನ್‌: ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ಬಾಂಬ್‌, ಕ್ಷಿಪಣಿ ಹಾಗೂ ಶೆಲ್‌ ದಾಳಿ ತೀವ್ರಗೊಳಿಸಿರುವ ರಷ್ಯಾ ಪಡೆಗಳು ಭಾನುವಾರ ಉಕ್ರೇನ್‌ನ ಮತ್ತೊಬ್ಬ ಪ್ರಮುಖ ಮೇಯರ್‌ ಒಬ್ಬರನ್ನು ಅಪಹರಿಸಿದ್ದಾರೆ.

ನಿಪ್ರೊರುದ್ನೆ ನಗರದ ಮೇಯರ್‌ ಯುಗ್ಗಿನ್‌ ಮತ್‌ವೀವ್‌ ಎಂಬುವವರನ್ನು ಝಪೊರಿಝಿಯಾದಿಂದ ರಷ್ಯಾ ಆಕ್ರಮಣಕಾರರು ಅಪಹರಿಸಿದ್ದಾರೆ ಎಂದು ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೊ ಕುಲೆಬಾ ಭಾನುವಾರ ಟ್ವೀಟ್‌ ಮಾಡಿದ್ದಾರೆ.

ರಷ್ಯಾದ ಆಕ್ರಮಣಕಾರರು ಭಾನುವಾರ ಕೂಡ ಮತ್ತೊಬ್ಬ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಉಕ್ರೇನ್‌ನ ನಿಪ್ರೊರುದ್ನೆ ನಗರದ ಮೇಯರ್‌ ಯುಗ್ಗಿನ್‌ ಮತ್‌ವೀವ್‌ ಅವರನ್ನು ಅಪಹರಿಸಿದ್ದಾರೆ. ಸ್ಥಳೀಯ ನಾಗರಿಕರು ತಿರುಗಿಬಿದ್ದಿರುವುದಕ್ಕೆ ರಷ್ಯಾ ಸೈನಿಕರು ಇಂತಹ ಭಯೋತ್ಪಾದನೆಯ ಹಾದಿ ಹಿಡಿದಿದ್ದಾರೆ. ಉಕ್ರೇನ್ ಮತ್ತು ಪ್ರಜಾಪ್ರಭುತ್ವದ ವಿರುದ್ಧ ರಷ್ಯಾ ನಡೆಸುತ್ತಿರುವ ಭಯೋತ್ಪಾದನೆ ನಿಲ್ಲಿಸಲು ಎಲ್ಲ ರಾಷ್ಟ್ರಗಳು ಒಗ್ಗೂಡಬೇಕು ಎಂದು ಝಪ್ರೊರಿಝಿಯಾ ಪ್ರದೇಶದ ರಾಜ್ಯ ಆಡಳಿತದ ಮುಖ್ಯಸ್ಥ ಒಲೆಕ್ಸಾಂಡರ್ ಸ್ಟಾರುಖ್ ಮನವಿ ಮಾಡಿದ್ದಾರೆ.

 

ಶನಿವಾರವಷ್ಟೇ ಮೆಲಿಟೊಪೊಲ್‌ ನಗರದ ಮೇಯರ್‌ ಇವಾನ್‌ ಪೆಡೊರೊವ್‌ ಅವರನ್ನು ರಷ್ಯಾ ಪಡೆಗಳು ಅಪಹರಿಸಿವೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದರು. ಪೆಡೊರೊವ್‌ ಅವರನ್ನು ಸುರಕ್ಷಿತ ಬಿಡುಗಡೆ ಮಾಡಿಸಲು ನೆರವು ನೀಡುವಂತೆ ಜರ್ಮನಿ, ಫ್ರಾನ್ಸ್‌ ಹಾಗೂ ಇಸ್ರೇಲ್‌ ದೇಶಗಳಿಗೆ ನೆರವು ನೀಡುವಂತೆ ಝೆಲೆನ್‌ಸ್ಕಿ ನೆರವು ಕೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು