ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರಿ ಗಗಾರಿನ್‌ ಅಂತರಿಕ್ಷಯಾನಕ್ಕೆ 60 ವರ್ಷ: ರಷ್ಯಾದಲ್ಲಿ ಸಂಭ್ರಮಾಚರಣೆ

Last Updated 12 ಏಪ್ರಿಲ್ 2021, 11:28 IST
ಅಕ್ಷರ ಗಾತ್ರ

ಮಾಸ್ಕೊ: ಅಂತರಿಕ್ಷಯಾನ ಮಾಡಿದ ಪ್ರಥಮ ಮಾನವ ಎಂಬ ಕೀರ್ತಿಗೆ ಪಾತ್ರರಾದ ದಂತಕಥೆ ಯೂರಿ ಗಗಾರಿನ್‌ ಬಾಹ್ಯಾಕಾಶಕ್ಕೆ ಕಾಲಿಟ್ಟು 60 ವರ್ಷಗಳು ತುಂಬಿದ್ದು, ರಷ್ಯಾದಲ್ಲಿ ಸೋಮವಾರ ಸಂಭ್ರಮಿಸಲಾಯಿತು.

ರಷ್ಯಾದ ಬಾಹ್ಯಾಕಾಶ ಉದ್ಯಮವು ಇತ್ತೀಚಿನ ವರ್ಷಗಳಲ್ಲಿ ಹಲವು ಅವಘಡಗಳನ್ನು ಎದುರಿಸಿ, ಸರಣಿ ವೈಫಲ್ಯಗಳನ್ನು ಅನುಭವಿಸುತ್ತಿದೆ. ಆದರೆ, ಆದರೆ 1961ರ ಏಪ್ರಿಲ್ 12ರಂದು ಮನುಷ್ಯನನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ಮೊದಲ ರಾಷ್ಟ್ರ ಎನ್ನುವ ಹಿರಿಮೆಗೆ ಸೋವಿಯತ್ ಒಕ್ಕೂಟ ಪಾತ್ರವಾಗಿದೆ.

ವೋಲ್ಗಾ ನದಿಯ ದಡದಲ್ಲಿರುವ ದಕ್ಷಿಣ ನಗರ ಏಂಗಲ್ಸ್‌ನಲ್ಲಿ ಗಗನಯಾತ್ರಿ ಇಳಿದ ಸ್ಥಳದಲ್ಲಿ ಐತಿಹಾಸಿಕ ಅಂತರಿಕ್ಷ ಯಾನ ಗೌರವಿಸಲು ಸ್ಮಾರಕವಿದೆ.

ಗಗಾರಿನ್ ನಡೆಸಿದ ಅಂತರಿಕ್ಷಯಾನದ ದಿನವನ್ನು ರಷ್ಯಾದಲ್ಲಿ ಪ್ರತಿವರ್ಷ ಕಾಸ್ಮೊನಾಟಿಕ್ಸ್ ದಿನವೆಂದು ಆಚರಿಸಲಾಗುತ್ತದೆ. ಈ ವರ್ಷ 60ನೇ ವಾರ್ಷಿಕೋತ್ಸವ ನಿಮಿತ್ತ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ನೌಕೆಯಿಂದ ನಾಲ್ವರು ರಷ್ಯಾದ ಗಗನಯಾತ್ರಿಗಳು, ನೆಲದ ದೇಶವಾಸಿಗಳಿಗೆ ವಂದಿಸಿದ್ದು, ದೇಶ ಬಾಂಧವರ ಸಾಧನೆಯನ್ನು ಶ್ಲಾಘಿಸಿ ಭೂಮಿಗೆ ಸಂದೇಶ ರವಾನಿಸಿದ್ದಾರೆ.

‘ರಷ್ಯಾ ಮುಂದಿನ ಪೀಳಿಗೆಯ ಬಾಹ್ಯಾಕಾಶ ನೌಕೆಯಲ್ಲಿ ಮತ್ತು ಚಂದ್ರಯಾನದಲ್ಲಿ ತುಂಬಾ ಮಹತ್ವದ ಬದಲಾವಣೆಗಳನ್ನು ನೋಡುವ ಹಾದಿಯಲ್ಲಿದೆ’ ಎಂದು ರಷ್ಯಾದ ರೋಸ್ಕೋಸ್ಮೋಸ್ ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥ ಡಿಮಿಟ್ರಿ ರೋಗೊಜಿನ್‌ ಇದೇ ಸಂದರ್ಭದಲ್ಲಿ ವಿಡಿಯೊ ಸಂದೇಶ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT