ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ: ಎಸ್‌.ಡಿ.ಬರ್ಮನ್‌ ನಿವಾಸ ಇನ್ನು ಸಾಂಸ್ಕೃತಿಕ ಸಂಕೀರ್ಣ

Last Updated 25 ಸೆಪ್ಟೆಂಬರ್ 2022, 14:22 IST
ಅಕ್ಷರ ಗಾತ್ರ

ಕುಮಿಲ್ಲಾ (ಬಾಂಗ್ಲಾದೇಶ): ಗಾಯಕ ಮತ್ತು ಸಂಗೀತ ನಿರ್ದೆಶಕ ಸಚಿನ್ ದೇವ್‌ ಬುರ್ಮನ್‌ ಅವರ ಕುಮಿಲ್ಲಾ ಜಿಲ್ಲೆಯಲ್ಲಿರುವ ಭವ್ಯ ನಿವಾಸವನ್ನು ಸಾಂಸ್ಕೃತಿಕ ಸಂಕೀರ್ಣವಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಯೋಜನೆ ಅನುಷ್ಠಾನಕ್ಕೆ ಪ್ರಧಾನಿ ಶೇಖ್‌ ಹಸೀನಾ ಸರ್ಕಾರ ₹86 ಲಕ್ಷ ಬಿಡುಗಡೆ ಮಾಡಿದೆ.

1906ರಲ್ಲಿ ಜನಿಸಿದ ಎಸ್‌.ಡಿ.ಬರ್ಮನ್‌ ದೇವ್‌ ಅವರು ತಮ್ಮ ಮೊದಲ 18 ವರ್ಷ ಕುಮಿಲ್ಲಾದ ದಕ್ಷಿಣ ಚರ್ಥಾ ಗ್ರಾಮದ ರಾಜ್‌ಬರಿಯಲ್ಲಿ (ಅರಮನೆ) ಕಳೆದಿದ್ದರು ಎಂದು ವಕೀಲ, ಇತಿಹಾಸಕಾರ ಗೊಲಾಮ್‌ ಫಾರುಕ್‌ ತಿಳಿಸಿದ್ದಾರೆ. ಏಳು ಎಕರೆ ಪ್ರದೇಶದಲ್ಲಿ ಅರಮನೆ ನಿರ್ಮಿಸಲಾಗಿದ್ದು, ಕಾಲಾನುಕ್ರಮದಲ್ಲಿ ಒಂದಿಷ್ಟು ಪ್ರದೇಶ ಅತಿಕ್ರಮಣವಾಗಿದೆ ಎಂದು ತಿಳಿಸಿದ್ದಾರೆ.

ದೇವ್‌ ಅವರ ತಂದೆ ತ್ರಿಪುರ ರಾಜವಂಶಸ್ಥರಾಗಿದ್ದು, ಕುಮಿಲ್ಲಾಗೆ ಹೋಗಿ ನೆಲೆಸಿದ್ದರು. ಇಲ್ಲಿನ ಅರಮನೆಯಲ್ಲಿ ದೇವ್‌ ಬೆಳೆದಿದ್ದರು. 1947ರ ಬಳಿಕ ದೇವ್‌ ಅವರ ಕುಟುಂಬಸ್ಥರು ಮತ್ತೆ ಭಾರತಕ್ಕೆ ವಲಸೆ ಬಂದಿದ್ದರು. ದೇವ್ ಅವರು ವಾಸವಿದ್ದ ಅರಮನೆಯ ಸಂರಕ್ಷಣೆಗೆ2017ರಲ್ಲಿ ಬಾಂಗ್ಲಾ ಅಧಿಕಾರಿಗಳು ತೀರ್ಮಾನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT