ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಷ್ಠಿತ ಸಿ.ಕೆ.ಪ್ರಹ್ಲಾದ್ ಪ್ರಶಸ್ತಿಗೆ ಸತ್ಯ ನಾದೆಲ್ಲಾ ಆಯ್ಕೆ

Last Updated 13 ಅಕ್ಟೋಬರ್ 2021, 6:09 IST
ಅಕ್ಷರ ಗಾತ್ರ

ವಾಷಿಂಗ್ಟನ್: ಉದ್ಯಮ ಹಾಗೂ ಸುಸ್ಥಿರ ಅಭಿವೃದ್ಧಿ ಕ್ಷೇತ್ರದಲ್ಲಿ ತೋರಿದ ನಾಯಕತ್ವಕ್ಕಾಗಿ ಮೈಕ್ರೋಸಾಫ್ಟ್‌ನ ಸಿಇಒ, ಭಾರತೀಯ ಅಮೆರಿಕನ್‌ ಸತ್ಯ ನಾದೆಲ್ಲಾ ಅವರನ್ನು ‘ಗ್ಲೋಬಲ್ ಬಿಸಿನೆಸ್ ಸಸ್ಟೇನಬಿಲಿಟಿ ಲೀಡರ್‌ಷಿಪ್‌’ಗಾಗಿ ನೀಡುವ ಪ್ರತಿಷ್ಠಿತ ಸಿ.ಕೆ.ಪ್ರಹ್ಲಾದ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮೈಕ್ರೋಸಾಫ್ಟ್‌ನ ಉನ್ನತ ಅಧಿಕಾರಿಗಳಾದ, ಅಧ್ಯಕ್ಷ ಬ್ರ್ಯಾಡ್‌ ಸ್ಮಿತ್, ಮುಖ್ಯ ಹಣಕಾಸು ಅಧಿಕಾರಿ ಅಮಿ ಹೂಡ್‌ ಹಾಗೂ ಮುಖ್ಯ ಪರಿಸರ ಅಧಿಕಾರಿ ಲೂಕಾಸ್ ಜೊಪ್ಪಾ ಅವರು ಸಹ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಈ ಪ್ರತಿಷ್ಠಿತ ಪ್ರಶಸ್ತಿ ನೀಡುವ ‘ಕಾರ್ಪೋರೇಟ್‌ ಇಕೊ ಫೋರಂ’ನ ಸಂಸ್ಥಾಪಕ ಎಂ.ಆರ್‌.ರಂಗಸ್ವಾಮಿ ತಿಳಿಸಿದ್ದಾರೆ.

‘ಪರಿಸರಕ್ಕೆ ಇಂಗಾಲ ಸೇರುವುದನ್ನು ತಡೆಗಟ್ಟಲು ಕಂಪನಿ ಕೈಗೊಂಡ ಕ್ರಮಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. 2030ರ ವೇಳೆಗೆ ಮೈಕ್ರೋಸಾಫ್ಟ್‌ಅನ್ನು ‘ಕಾರ್ಬನ್‌ ನೆಗೆಟಿವ್ ಕಂಪನಿ’ಯನ್ನಾಗಿ ಪರಿವರ್ತಿಸಲು ಈ ನಾಲ್ವರ ಸಂಘಟಿತ ಪ್ರಯತ್ನ, ನಾಯಕತ್ವ ಅನುಕರಣೀಯ’ ಎಂದು ರಂಗಸ್ವಾಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT