ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರ ಕೃತ್ಯಗಳಲ್ಲಿ ತೊಡಗಿದ್ದ 81 ಮಂದಿಯನ್ನು ಒಂದೇ ದಿನ ಗಲ್ಲಿಗೇರಿಸಿದ ಸೌದಿ

Last Updated 12 ಮಾರ್ಚ್ 2022, 14:20 IST
ಅಕ್ಷರ ಗಾತ್ರ

ರಿಯಾದ್‌: ಭಯೋತ್ಪಾದನೆ ಸಂಬಂಧಿಸಿದ ವಿವಿಧ ಅಪರಾಧಗಳ ಮೇಲೆ ಒಂದೇ ದಿನದಲ್ಲಿ 81 ಜನರನ್ನು ಗಲ್ಲಿಗೇರಿಸಿರುವುದಾಗಿ ಸೌದಿ ಅರೇಬಿಯಾ ಶನಿವಾರ ಹೇಳಿದೆ. ಇದು 2021 ರಲ್ಲಿ ಜಾರಿಗೆ ತಂದಿದ್ದ ಮರಣದಂಡನೆಗಳಿಗಿಂತಲೂ ಹೆಚ್ಚು ಎಂದು ಸರ್ಕಾರ ತಿಳಿಸಿದೆ.

ಶಿಕ್ಷೆಗೊಳಗಾದವರು ಇಸ್ಲಾಮಿಕ್ ಸ್ಟೇಟ್, ಅಲ್-ಖೈದಾ, ಹೌತಿ ಮತ್ತು ಇತರ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದವರಾಗಿದ್ದರು ಎಂದು ಸೌದಿಯ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಹೇಳಿದೆ.

ಮರಣದಂಡನೆಗೆ ಒಳಗಾದವರೆಲ್ಲರೂ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಲು ಮತ್ತು ಶಸ್ತ್ರಾಸ್ತ್ರಗಳನ್ನು ದೇಶದೊಳಗೆ ಕಳ್ಳಸಾಗಣೆ ಮಾಡಲು ಸಂಚು ರೂಪಿಸುತ್ತಿದ್ದರು ಎಂದು ಅದು ವರದಿ ಮಾಡಿದೆ.

2021ರಲ್ಲಿ ಸೌದಿಯಲ್ಲಿ 67 ಮಂದಿಗೆ ಮರಣದಂಡನೆ ವಿಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT