ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update| ವಿಜ್ಞಾನಿಗಳ ಆತಂಕಕ್ಕೆ ಕಾರಣವಾಗಿದೆ ಕೊರೊನಾ ರೂಪಾಂತರ

Last Updated 2 ಫೆಬ್ರುವರಿ 2021, 17:18 IST
ಅಕ್ಷರ ಗಾತ್ರ

ಲಂಡನ್‌: ಅತಿವೇಗವಾಗಿ ಪ್ರಸರಣೆ ಹೊಂದಬಲ್ಲ, ಬ್ರಿಟನ್‌ ಮಾದರಿಯ ಕೊರೊನಾ ವೈರಸ್‌ ಮತ್ತೊಮ್ಮೆ ರೂಪಾಂತರಗೊಂಡಿದೆ. ಈ ಬೆಳವಣಿಗೆಯು ತಜ್ಞರ ಆತಂಕಕ್ಕೆ ಕಾರಣವಾಗಿದೆ.

ಹೊಸ ಮಾದರಿಯನ್ನು 'ಕೆಂಟ್‌ ವೇರಿಯೆಂಟ್‌' ಎಂದು ಹೆಸರಿಸಲಾಗಿದೆ. ಇಂಗ್ಲೆಂಡ್‌ನ ಕೆಂಟ್‌ ಎಂಬಲ್ಲಿ ಮೊದಲ ಬಾರಿಗೆ ಪತ್ತೆಯಾದ ಕಾರಣಕ್ಕೆ ಇದಕ್ಕೆ ಅದೇ ಹೆಸರು ಇಡಲಾಗಿದೆ. 'E484K' ಎಂಬ ವೈಜ್ಞಾನಿಕ ಸಂಕೇತದ ಈ ರೂಪಾಂತರವು ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ ಮಾದರಿಯ ರೂಪಾಂತರಿ ಕೊರೊನಾ ವೈರಸ್‌ಗಳಲ್ಲಿಯೂ ಕಾಣಿಸಿಕೊಂಡಿದೆ. ಈ ಕೊರೊನಾ ವೈರಸ್‌ನ ರೂಪಾಂತರವು ಈಗ ಬಳಕೆಯಾಗುತ್ತಿರುವ ಲಸಿಕೆಗಳ ಪರಿಣಾಮಕಾರಿತ್ವದ ಮೇಲೆ ಅನುಮಾನ ಮೂಡುವಂತೆ ಮಾಡುತ್ತಿದೆ. ಇದು ವಿಜ್ಞಾನಿಗಳ ಆತಂಕಕ್ಕೂ ಕಾರಣವಾಗಿದೆ.

ಇನ್ನೊಂದೆಡೆ ಬ್ರಿಟನ್‌ನ ಒಟ್ಟು ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ 38,52,623 ಆಗಿದ್ದು, ಈ ವರೆಗೆ 1,08,013 ಮಂದಿ ಮೃತಪಟ್ಟಿದ್ದಾರೆ.

ಅತಿ ಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ಪಟ್ಟಿಯಲ್ಲಿ ಅಮೆರಿಕ ಎಂದಿನಂತೇ ಮುಂದಿದೆ. 26,923,946 ಮಂದಿ ಈ ವರೆಗೆ ಸೋಂಕುಗೊಂಡಿದ್ದರೆ, 4,54,712 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ 1,07,77,551 ಸೋಂಕು ಪ್ರಕರಣಗಳು ವರದಿಯಾಗಿದ್ದು, 1,54,605 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT