ಅಫ್ಗಾನಿಸ್ತಾನ ಪರಿಸ್ಥಿತಿ ಬಗ್ಗೆ ಜರ್ಮನ್ ರಾಯಭಾರಿ ಜೊತೆ ತಾಲಿಬಾನ್ ಮಾತುಕತೆ

ಕಾಬೂಲ್: ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ಸ್ತಾನೆಕ್‌ಝೈ, ಅಫ್ಗಾನಿಸ್ತಾನದಲ್ಲಿನ ಜರ್ಮನಿ ರಾಯಭಾರಿ ಮಾರ್ಕ್ಸ್ ಪುಟ್ಜೆಲ್ ಅವರನ್ನು ಶುಕ್ರವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಅಬ್ಬಾಸ್ ಮತ್ತು ಪುಟ್ಜೆಲ್ ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿ, ಕಾಬೂಲ್ ವಿಮಾನ ನಿಲ್ದಾಣವನ್ನು ಮತ್ತೆ ತೆರೆಯುವುದು ಹಾಗೂ ಅಫ್ಗಾನ್‌ಗೆ ಜರ್ಮನಿಯ ಮಾನವೀಯ ನೆರವನ್ನು ಮುಂದುವರಿಸುವ ಕುರಿತು ಚರ್ಚೆ ನಡೆಸಿದ್ದಾರೆ ಎಂದು TOLOನ್ಯೂಸ್ ವರದಿ ಮಾಡಿದೆ.
ತಾಲಿಬಾನ್‌ನ ಹಿರಿಯ ನಾಯಕನಾಗಿರುವ ಅಬ್ಬಾಸ್, ಕತಾರ್‌ನಲ್ಲಿರುವ ಟರ್ಕಿಯ ರಾಯಭಾರಿ ಮುಸ್ತಾಫ ಗೊಕ್ಸು ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಅಫ್ಗಾನಿಸ್ತಾನ ಸರ್ಕಾರ ಪತನವಾಗಿ ಆಡಳಿತವು ತಾಲಿಬಾನ್ ವಶವಾದ ಬಳಿಕ ಆ ದೇಶದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.
ಇವನ್ನೂ ಓದಿ
* ಅಫ್ಗನ್ ಕಸಿಯಲು ತಾಲಿಬಾನ್ಗೆ ಪಾಕ್ ನೆರವು ನೀಡಿರುವ ಬಗ್ಗೆ ಪುರಾವೆ ಇಲ್ಲ: ಅಮೆರಿಕ
* ಅಫ್ಗಾನಿಸ್ತಾನದಲ್ಲಿ ಇರಾನ್ ಮಾದರಿ ಸರ್ಕಾರ: ಹೇಗಿರಲಿದೆ ಆಡಳಿತ ವ್ಯವಸ್ಥೆ?
* ಅಮೆರಿಕ ಮೋಸ ಮಾಡಿತು: ಅಫ್ಗನ್ ತೊರೆಯಲಾಗದವರ ನೋವು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.