ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೆಜಿಲ್: ತೀವ್ರ ಪ್ರವಾಹ, 4.70 ಲಕ್ಷ ಜನ ಸಂಕಷ್ಟದಲ್ಲಿ

Last Updated 29 ಡಿಸೆಂಬರ್ 2021, 12:40 IST
ಅಕ್ಷರ ಗಾತ್ರ

ಬ್ರೆಸಿಲಿಯಾ:ಈಶಾನ್ಯ ಬ್ರೆಜಿಲಿಯನ್ ಬಹಿಯಾ ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, 116 ನಗರಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಬ್ರೆಜಿಲ್‌ನ ಉತ್ತರ ಮತ್ತು ಆಗ್ನೇಯ ಪ್ರಾಂತ್ಯದ ಇತರ ಐದು ರಾಜ್ಯಗಳಲ್ಲಿ ಸಹ ಪ್ರವಾಹ ಉಂಟಾಗಿದೆ.

ಬಹಿಯಾದಲ್ಲಿ ಪ್ರವಾಹವು 4.70 ಲಕ್ಷಕ್ಕೂ ಹೆಚ್ಚು ಜನರನ್ನು ಬಾಧಿಸಿದ್ದು, 43 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಇದುವರೆಗೆ 21 ಮಂದಿ ಮೃತಪಟ್ಟಿದ್ದು, 358 ಮಂದಿ ಗಾಯಗೊಂಡಿದ್ದಾರೆ.

ಮಂಗಳವಾರ ಬೆಳಿಗ್ಗೆ ರೇಡಿಯೊ ಸಂದರ್ಶನದಲ್ಲಿ ಮಾತನಾಡಿದ ಬಹಿಯಾ ವರ್ನರ್ ರುಯಿ ಕೋಸ್ಟಾ ಪರಿಸ್ಥಿತಿಯನ್ನು ‘ಗುಂಡಿನ ಸುರಿಮಳೆ‘ ಎಂದು ಕರೆದಿದ್ದು, ಪ್ರವಾಹದಿಂದಕೆಲವು ನಗರಗಳಲ್ಲಿ ಕೊರೊನಾವೈರಸ್ ಲಸಿಕೆಗಳು ಕಳೆದುಹೋಗಿವೆ. ನಗರಸಭೆಯ ಕೆಲ ಆರೋಗ್ಯ ಕಚೇರಿಗಳು ಹಾಗೂ ಔಷಧ ಕೇಂದ್ರಗಳು ಸಂಪೂರ್ಣ ಜಲಾವೃತಗೊಂಡಿವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT