ಭಾನುವಾರ, ಜೂನ್ 20, 2021
25 °C

ಭಾರತದ ಕೋವಿಡ್‌ ರೋಗಿಗಳಿಗೆ ಅಮೆರಿಕ ಸಂಘಟನೆಗಳಿಂದ ಉಚಿತ ವೈದ್ಯಕೀಯ ಸಮಾಲೋಚನೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಹೂಸ್ಟನ್‌(ಅಮೆರಿಕ): ಭಾರತದ ಕೋವಿಡ್‌ ರೋಗಿಗಳಿಗೆ ವೈದ್ಯಕೀಯ ಸಲಹೆಯನ್ನು ಒದಗಿಸುವ ನಿಟ್ಟಿನಲ್ಲಿ ಅಮೆರಿಕದಲ್ಲಿರುವ ಭಾರತ ಮೂಲದ ಎರಡು ಸಂಘಟನೆಗಳು ಟೆಲಿಹೆಲ್ತ್ ಪ್ಲಾಟ್‌ಫಾರ್ಮ್‌ನೊಂದಿಗೆ ಕೈಜೋಡಿಸಿದೆ.

ಅಮೆರಿಕನ್ ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯನ್-ಆರಿಜಿನ್‌ನ (ಎಎಪಿಐ) ಸ್ವಯಂ ಸೇವಕರು ಮತ್ತು ಸೇವಾ ಇಂಟರ್‌ನ್ಯಾಷನ್‌ಲ್‌ನ ವೈದ್ಯಕೀಯ ಘಟಕದ ವೈದ್ಯರು ‘ಇಗ್ಲೋಬಲ್‌ಡಾಕ್ಟರ್ಸ್‌’ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ಮೂಲಕ ಕೊರೊನಾ ಸೋಂಕಿತರಿಗೆ ಉಚಿತ ವೈದ್ಯಕೀಯ ಸಲಹೆಗಳನ್ನು ನೀಡುತ್ತಿದ್ದಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಕಳೆದ 10 ದಿನಗಳಲ್ಲಿ ಎಎಪಿಐ ಮತ್ತು ಸೇವಾ ಇಂಟರ್‌ನ್ಯಾಷನಲ್‌ನ 100 ಕ್ಕೂ ಹೆಚ್ಚು ವೈದ್ಯರು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಹೆಸರು ನೋಂದಾಯಿಸಿದ್ದಾರೆ.  ಕನಿಷ್ಠ 2,000 ರೋಗಿಗಳು ಹೆಸರು ನೋಂದಾಯಿಸಿದ್ದಾರೆ. ಈಗಾಗಲೇ 500 ರೋಗಿಗಳು ವೈದ್ಯಕೀಯ ಸಮಾಲೋಚನೆ ಪಡೆದಿದ್ದಾರೆ’ ಎಂದು ಇಗ್ಲೋಬಲ್‌ಡಾಕ್ಟರ್ಸ್‌ನ ಸಹ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ಶ್ರೀನಿ ಗಂಗಾಸಾನಿ ಅವರು ಮಾಹಿತಿ ನೀಡಿದರು.

‘ಜಮ್ಮು, ಕೋಲ್ಕತ್ತ, ತಮಿಳುನಾಡು ಸೇರಿದಂತೆ ಭಾರತದೆಲ್ಲೆಡೆಯಿಂದ ರೋಗಿಗಳು ಈ ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು