ಶುಕ್ರವಾರ, ಡಿಸೆಂಬರ್ 2, 2022
19 °C

ಶಾಂಘೈ: ಕೋವಿಡ್‌ ಪ್ರಕರಣಡಿಸ್ನಿ ರೆಸಾರ್ಟ್‌ ಬಂದ್, ಕಠಿಣ ನಿರ್ಬಂಧ ಹೇರಿಕೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಶಾಂಘೈ (ರಾಯಿಟರ್ಸ್): ಚೀನಾದ ಪ್ರಮುಖ ನಗರ ಶಾಂಘೈನ ಡಿಸ್ನಿ ರೆಸಾರ್ಟ್ ಪ್ರವಾಸಿಗರೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ತಾತ್ಕಾಲಿಕವಾಗಿ ರೆಸಾರ್ಟ್‌ ಅನ್ನು ಮುಚ್ಚಲಾಗಿದೆ. ಇಲ್ಲಿಗೆ ಭೇಟಿ ನೀಡಿದ್ದವರಿಗೆ ಮನೆಯಲ್ಲಿಯೇ ಉಳಿಯಲು ಸೂಚಿಸಲಾಗಿದೆ.

ಡಿಸ್ನಿ ರೆಸಾರ್ಟ್‌ಗೆ ಭೇಟಿ ನೀಡಿದ್ದ ಮಹಿಳೆಯೊಬ್ಬರಿಗೆ ಕೋವಿಡ್‌ ದೃಢಪಟ್ಟಿತ್ತು. ಹೀಗಾಗಿ ರೆಸಾರ್ಟ್ ಮುಚ್ಚಿದ್ದು, ಒಳಗಿದ್ದವರನ್ನು ತಪಾಸಣೆಗೆ ಒಳಪಡಿಸಿ ನೆಗೆಟಿವ್‌ ವರದಿ ಬಂದ ನಂತರವೇ ಹೊರಗೆ ಬಿಡಲಾಯಿತು.  

ಚೀನಾದಲ್ಲಿ ಹೊಸದಾಗಿ ದಾಖಲಾದ ಪ್ರಕರಣಗಳ ಸಂಖ್ಯೆ 2,719. ಇದು, ಆಗಸ್ಟ್ 17ರ ನಂತರ ದಾಖಲಾದ ಅತ್ಯಧಿಕ ಪ್ರಕರಣ. ಇದರ ಹಿಂದೆಯೇ, ಪ್ರಮುಖ ನಗರಗಳಾದ ಗುವಾಂಗ್‌ಹೌ ಮತ್ತು ಡಾಂಗೊಂಗ್‌ನಲ್ಲಿ ಕಠಿಣ ನಿರ್ಬಂಧ ಕ್ರಮಗಳನ್ನು ಹೇರಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು