ಭಾನುವಾರ, ಜೂನ್ 13, 2021
20 °C

ಅಮೆರಿಕ: ಅಫ್ಗಾನಿಸ್ತಾನದ ಸಿಖ್‌, ಹಿಂದೂ ಸಮುದಾಯದವರ ಸ್ಥಳಾಂತರಕ್ಕೆ ಮನವಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಫ್ಗಾನಿಸ್ತಾನದಲ್ಲಿ ಅಳಿವಿನಂಚಿನಲ್ಲಿರುವ ಅಲ್ಪಸಂಖ್ಯಾತರಾದ ಸಿಖ್‌ ಮತ್ತು ಹಿಂದೂ ಸಮುದಾಯದ ಜನರನ್ನು ಯುದ್ಧ ಪೀಡಿತ ಪ್ರದೇಶದಿಂದ ಅಮೆರಿಕಕ್ಕೆ ಸ್ಥಳಾಂತರಗೊಳಿಸುವಂತೆ ಅಮೆರಿಕ ಸಂಸತ್ತಿನಲ್ಲಿ ನಿರ್ಣಯ ಮಂಡಿಸಲಾಗಿದೆ.

ಕಳೆದ ವಾರ ಸಂಸದೆ ಜಾಕಿ ಸ್ಪೀಯರ್‌ ಸೇರಿದಂತೆ 7 ಮಂದಿ ಸಂಸತ್ತಿನಲ್ಲಿ ಈ ನಿರ್ಣಯ ಮಂಡಿಸಿದ್ದಾರೆ. ಇದರಲ್ಲಿ  ಅಫ್ಗಾನಿಸ್ತಾನದ ನಿರಾಶ್ರಿತ ಸಿಖ್‌ ಮತ್ತು ಹಿಂದೂ ಸಮುದಾಯ ಜನರಿಗೆ ಧಾರ್ಮಿಕ ಕಿರುಕುಳ, ತಾರತಮ್ಯ, ಭಯೋತ್ಪಾದನೆಯಿಂದ ರಕ್ಷಣೆ ನೀಡುವ ಬಗ್ಗೆ ಹೇಳಲಾಗಿದೆ.

ಅಫ್ಗಾನಿಸ್ತಾನದಲ್ಲಿ ಸಿಖ್‌ ಮತ್ತು ಹಿಂದೂ ಸಮುದಾಯ ಅಳಿವಿನಂಚಿನಲ್ಲಿದೆ. ಈ ಸಮುದಾಯದ ವಿರುದ್ಧ ಭಯೋತ್ಪಾದಕರ ದಾಳಿ, ಶೋಷಣೆಗಳು ಹೆಚ್ಚಾಗಿ ನಡೆಯುತ್ತಿವೆ. ಹಾಗಾಗಿ  ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯ ಅನುಸಾರ ನಿರಾಶ್ರಿತರ ಪ್ರವೇಶ ಕಾರ್ಯಕ್ರಮದಡಿ ಅಫ್ಗಾನಿಸ್ತಾನದ ಸಿಖ್ಖರು ಮತ್ತು ಹಿಂದೂಗಳಿಗೆ ಅಮೆರಿಕದಲ್ಲಿ ಪುನರ್ವಸತಿ ಕಲ್ಪಿಸಿಕೊಡಲು ಅವಕಾಶ ನೀಡಬೇಕು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು