ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರ: 3,703 ಕೋವಿಡ್‌ ಹೊಸ ಪ್ರಕರಣಗಳು ವರದಿ

Last Updated 10 ಅಕ್ಟೋಬರ್ 2021, 6:05 IST
ಅಕ್ಷರ ಗಾತ್ರ

ಸಿಂಗಪುರ: ‘ಸಿಂಗಪುರದಲ್ಲಿ ಹೊಸದಾಗಿ 3,703 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇಶದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1,24,157ಕ್ಕೇರಿದಂತಾಗಿದೆ’ ಎಂದು ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.

‘ವಸತಿನಿಲಯಗಳಲ್ಲಿರುವ 832 ವಲಸಿಗ ಕಾರ್ಮಿಕರು ಹಾಗೂ ವಿದೇಶಗಳಿಂದ ಬಂದವರ ಪೈಕಿ ಮೂವರಲ್ಲಿ ಕೋವಿಡ್‌ ದೃಢಪಟ್ಟಿದೆ’ ಎಂದು ಸಚಿವಾಲಯ ತಿಳಿಸಿದೆ.

‘ಕೋವಿಡ್‌ನಿಂದಾಗಿ ಕಂಡುಬಂದ ಆರೋಗ್ಯ ತೊಂದರೆಗಳಿಂದಾಗಿ ಈ ತಿಂಗಳು 52 ಜನ ಮೃತಪಟ್ಟಿದ್ದು, ಇದರೊಂದಿಗೆ ಮೃತರ ಸಂಖ್ಯೆ 153ಕ್ಕೇರಿದಂತಾಗಿದೆ’ ಎಂದೂ ಸಚಿವಾಲಯ ತಿಳಿಸಿದೆ.

‘ಇನ್ನೂ ಕೆಲ ವಾರಗಳ ಅವಧಿಗೆ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುವ ಸಾಧ್ಯತೆಗಳಿವೆ. ಆದರೆ, ತಿಂಗಳೊಳಗೆ ಸೋಂಕು ಪ್ರಸರಣ ನಿಯಂತ್ರಣಕ್ಕೆ ಬರುವ ವಿಶ್ವಾಸ ಇದೆ’ ಎಂದು ಪ್ರಧಾನಿ ಲೀ ಸೇನ್ ಲೂಂಗ್‌ ಹೇಳಿದ್ದಾರೆ.

ದೇಶವನ್ನು ಉದ್ದೇಶಿಸಿ ದೂರದರ್ಶನ ಮೂಲಕ ಶನಿವಾರ ಮಾತನಾಡಿದ ಅವರು, ‘ದೇಶದ ಆರೋಗ್ಯ ವ್ಯವಸ್ಥೆ ಮೇಲೆ ಒತ್ತಡ ಬೀಳದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಕೋವಿಡ್‌ನ ಸೌಮ್ಯ ಲಕ್ಷಣಗಳಿದ್ದರೂ ಆಸ್ಪತ್ರೆಗೆ ದೌಡಾಯಿಸುವುದು ಬೇಡ. ಹೀಗೆ ಮಾಡುವುದರಿಂದ ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಹಾಸಿಗೆ ಸಿಗದಂತಾಗುವುದು’ ಎಂದು ಹೇಳಿದ್ದಾರೆ.

ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲು ನಿರ್ಧರಿಸಿರುವ ಸರ್ಕಾರ, ಲಸಿಕೆಯ ಎರಡು ಡೋಸ್‌ಗಳನ್ನು ಹಾಕಿಸಿಕೊಂಡವರು ಸಿಂಗಪುರಕ್ಕೆ ಬಂದರೆ, ಕ್ವಾರಂಟೈನ್ ಆಗುವ ಅಗತ್ಯ ಇಲ್ಲ ಎಂದು ಶನಿವಾರ ಘೋಷಿಸಿದೆ. ಹೀಗಾಗಿ ಟಿಕೆಟ್‌ ಕಾಯ್ದಿರಿಸುತ್ತಿರುವ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT