ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಸರೋವರಕ್ಕೆ ಬಿದ್ದ ಚಿಕ್ಕ ವಿಮಾನ, ಎಲ್ಲಾ 7 ಮಂದಿ ಸಾವು

Last Updated 30 ಮೇ 2021, 6:28 IST
ಅಕ್ಷರ ಗಾತ್ರ

ಸ್ಮಿರ್ನಾ (ಅಮೆರಿಕ): ‘ಏಳು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಸಣ್ಣ ವಿಮಾನವೊಂದು ಟೆನ್ನೆಸ್ಸಿ ಸರೋವರದಲ್ಲಿ ಶನಿವಾರ ಪತನಗೊಂಡಿದೆ. ಈ ಅಪಘಾತದಲ್ಲಿ ಯಾರೊಬ್ಬರೂ ಬದುಕುಳಿದಂತೆ ಕಾಣಿಸುತ್ತಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಬೆಳಿಗ್ಗೆ 11 ಗಂಟೆಗೆ ಹತ್ತಿರದ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆದ ಸೆಸ್ನಾ ಸಿ 501 ವಿಮಾನವು ಟೆನ್ನೆಸ್ಸಿಯಲ್ಲಿರುವ ಪೆರ್ಸಿ ಪ್ರೀಸ್ಟ್‌ ಸರೋವರದಲ್ಲಿ ಪತನಗೊಂಡಿದೆ’ ಎಂದು ಫೆಡರಲ್‌ ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ ಹೇಳಿಕೆ ಬಿಡುಗಡೆ ಮಾಡಿದೆ.

ಈ ವಿಮಾನವು ಸ್ಮಿರ್ನಾ ರುದರ್‌ಫೋರ್ಡ್‌ ಕೌಂಟಿ ವಿಮಾನ ನಿಲ್ದಾಣದಿಂದ ಪಾಮ್‌ ಬೀಚ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಪ್ರಯಣಿಸುತ್ತಿತ್ತು.

ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಮತ್ತು ಎಫ್‌ಎಯ ತನಿಖಾಧಿಕಾರಿಗಳು ಘಟನಾ ಸ್ಥಳವನ್ನು ಪರಿಶೀಲಿಸಿದ್ದಾರೆ.

ನಾಶ್ವಿಲ್ಲೆಯಿಂದ 32 ಕಿ.ಮೀ.ಆಗ್ನೇಯಕ್ಕೆ ಸ್ಮಿರ್ನಾ ಇದ್ದು, ಜೆ. ಪೆರ್ಸಿ ಪ್ರೀಸ್ಟ್‌ ಅಣೆಕಟ್ಟೆಯಿಂದ ನಿರ್ಮಾಣವಾಗಿರುವ ಈ ಸರೋವರ ಬೋಟಿಂಗ್ ಮತ್ತು ಮೀನುಗಾರಿಕೆಗೆ ಖ್ಯಾತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT