ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ನಲ್ಲಿ ಭಾರಿ ಹಿಮಪಾತ: ಮೂರು ಮಂದಿ ಸಾವು

Last Updated 21 ಡಿಸೆಂಬರ್ 2022, 10:50 IST
ಅಕ್ಷರ ಗಾತ್ರ

ಟೋಕಿಯೊ: ಜಪಾನ್‌ನ ವಾಯುವ್ಯ ಭಾಗದಲ್ಲಿ ಕಂಡುಬಂದಿರುವ ಭಾರಿ ಹಿಮಪಾತದಿಂದಾಗಿ ಮೂರು ಮಂದಿ ಸಾವಿಗೀಡಾಗಿದ್ದಾರೆ’ ಎಂದು ಅಧಿಕಾರಿಗಳುಬುಧವಾರ ತಿಳಿಸಿದ್ದಾರೆ.

‘ಭಾರಿ ಹಿಮದಿಂದಾಗಿ ಅನೇಕ ವಾಹನಗಳು ಹೆದ್ದಾರಿಯಲ್ಲೇ ಸಿಕ್ಕಿಬಿದ್ದಿದ್ದು, ಸಾವಿರಾರು ಮನೆಗಳ ವಿದ್ಯುತ್‌ ಸ್ಥಗಿತಗೊಂಡಿದೆ. ನಿಗಾಟ, ಯಮಗಾಟ ಹಾಗೂ ಅಮೋರಿ ಪ್ರಾಂತ್ಯದಲ್ಲಿ ಆರೂವರೆ ಅಡಿಗಿಂತಲೂ ಹೆಚ್ಚು ಹಿಮ ಬಿದ್ದಿದೆ’ ಎಂದೂ ಅವರು ಹೇಳಿದ್ದಾರೆ.

ನಿಗಾಟದ ಹೆದ್ದಾರಿಯಲ್ಲಿ ಸುಮಾರು 20 ಕಿ.ಮೀ.ವರೆಗೂ ವಾಹನಗಳು ಹಿಮದಲ್ಲಿ ಸಿಕ್ಕಿಬಿದ್ದಿದ್ದು, ಸ್ವಯಂ ರಕ್ಷಣಾ ಪಡೆಗಳು ಹಿಮವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದವು. ಇವರ ಜೊತೆಗೆ, ಕೆಲವು ಸ್ಥಳೀಯ ಸ್ವಯಂಸೇವಕರು ಹಲವು ಗಂಟೆಗಳಿಂದ ವಾಹನಗಳಲ್ಲಿ ಸಿಕ್ಕಿಬಿದ್ದಿರುವ ಪ್ರಯಾಣಿಕರಿಗೆ ಆಹಾರವನ್ನು ಒದಗಿಸಿದರು.

ಈ ವಾರಾಂತ್ಯದಲ್ಲಿ ಮತ್ತೆ ಭಾರಿ ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT