ಮಂಗಳವಾರ, ಆಗಸ್ಟ್ 16, 2022
29 °C

ಅಮೆರಿಕದಲ್ಲಿ ಭಾರಿ ಚಳಿ: 15 ಸೆಂ.ಮೀ. ದಪ್ಪದ ಹಿಮಪಾತ

ಎಪಿ Updated:

ಅಕ್ಷರ ಗಾತ್ರ : | |

Prajavani

ಸಿಯಾಟಲ್‌ (ಅಮೆರಿಕ): ಪೆಸಿಫಿಕ್‌ ಸಾಗರದ ವಾಯವ್ಯ ಭಾಗದಿಂದ ಬೀಸುತ್ತಿರುವ ತೀವ್ರ ಚಳಿಗಾಳಿಯಿಂದಾಗಿ ಉತ್ತರ ಕ್ಯಾಲಿಫೋರ್ನಿಯಾ ಮತ್ತು ನವೇಡಾ ಭಾಗದಲ್ಲಿ ಭಾರಿ ಚಳಿ ಆವರಿಸಿದ್ದು, ಸುಮಾರು 15 ಸೆಂ.ಮೀ.ದಪ್ಪದ ಹಿಮಪಾತವಾಗುತ್ತಿದೆ.

ವಾಷಿಂಗ್ಟನ್‌ನ ಪಶ್ಚಿಮ ಭಾಗ ಹಾಗೂ ಒರೆಗಾನ್‌ನ ಖಾಸಗಿ ಸಂಘಟನೆಗಳು ಸಹ ತುರ್ತು ಪರಿಹಾರ ಶೆಡ್‌ಗಳನ್ನು ನಿರ್ಮಿಸಿದ್ದು, ಚಳಿಯಿಂದ ರಕ್ಷಣೆ ಪಡೆಯಲು ಸಾಧ್ಯವಿಲ್ಲದ ಜನರು ಇಲ್ಲಿ ಆಶ್ರಯ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಈ ವಾರಾಂತ್ಯದವರೆಗೂ ತೀವ್ರ ಚಳಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಲಾಸ್ಕಾ ಖಾರಿ ಪ್ರದೇಶದಲ್ಲಿ 15 ಸೆಂ.ಮೀ.ದಪ್ಪಕ್ಕೆ ಹಿಮಪಾತವಾಗಿದ್ದರೆ, ಸಿಯಾಟಲ್‌ ಪ್ರದೇಶದಲ್ಲಿ ಹಿಮಪಾತದಿಂದಾಗ ವಾಹನ ಸಂಚಾರಕ್ಕೆ ಧಕ್ಕೆ ಉಂಟಾಯಿತು. ಸಿಯಾಟಲ್‌ನಲ್ಲಿ –6.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿ 1948ರ ದಾಖಲೆ ಹಿಂದಿಕ್ಕಿದರೆ, ವಾಷಿಂಗ್ಟನ್‌ನ ಬೆಲ್ಲಿಂಗ್‌ಹ್ಯಾಮ್‌ನಲ್ಲಿ –12.8 ಡಿಗ್ರಿ ಸೆಲ್ಸಿಯಸ್‌ನಷ್ಟು ಇತ್ತು. ಈ ಮೂಲಕ 1971ರಲ್ಲಿ ನಿರ್ಮಾಣವಾಗಿದ್ದ ದಾಖಲೆ ಮುರಿದಿದೆ.

ಒರೆಗಾನ್‌ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಉತ್ತರ ಕ್ಯಾಲಿಫೋರ್ನಿಯಾ ಮತ್ತು ನವೇಡಾದಲ್ಲಿ ಪ್ರಮುಖ ಹೆದ್ದಾರಿಗಳನ್ನು ಬಂದ್‌ ಮಾಡಲಾಗಿದೆ.

ಸಿಯಾರಾದಲ್ಲಿನ ಡೋನರ್‌ ಪಾಸ್‌ನಲ್ಲಿ ಡಿಸೆಂಬರ್‌ ಚಳಿಯಲ್ಲಿ 4.6 ಮೀಟರ್‌ ದಪ್ಪಕ್ಕೆ ಹಿಮಪಾತವಾಗಿದ್ದುದು ಇದುವರೆಗಿನ ದಾಖಲೆಯಾಗಿತ್ತು. 1970ರಲ್ಲಿ ಈ ಪ್ರಸಂಗ ನಡೆದಿತ್ತು. ಈ ಬಾರಿ ಅದು 4.9 ಮೀಟರ್‌ಗೆ ಹೆಚ್ಚುವ ನಿರೀಕ್ಷೆ ಇದೆ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಅಧಿಕಾರಿಗಳು ಅಂದಾಜಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು