ಗುರುವಾರ , ನವೆಂಬರ್ 26, 2020
20 °C

ಪಕ್ಷಪಾತ ಪೋಸ್ಟ್‌ ಪ್ರಕಟಣೆ: ಆರೋಪ ನಿರಾಕರಿಸಿದ ಸಾಮಾಜಿಕ ಜಾಲತಾಣಗಳ ಸಿಇಒಗಳು

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ತಮ್ಮ ಪಕ್ಷದ ವಿರುದ್ಧ ಸಂಪ್ರದಾಯ ವಿರೋಧಿ ಪಕ್ಷಪಾತದ ಪೋಸ್ಟ್‌ಗಳ ಪ್ರಕಟಿಸುತ್ತಿದ್ದಾರೆ ಎಂಬ  ರಿಪಬ್ಲಿಕನ್‌ ಪಕ್ಷದ ಸೆನಟರ್‌ಗಳ ಆರೋಪವನ್ನು ಟ್ವಿಟ್ಟರ್‌, ಫೇಸ್‌ಬುಕ್‌ ಮತ್ತು ಗೂಗಲ್‌ ಸಾಮಾಜಿಕ ಜಾಲತಾಣಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಇಒ) ನಿರಾಕರಿಸಿದ್ದಾರೆ.

ಇಲ್ಲಿನ ಸೆನೆಟ್‌ ಎದುರು ನಡೆದ ವಿಚಾರಣೆಯಲ್ಲಿ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿರುವ ಸಿಇಒಗಳು ಮುಂದಿನ ವಾರ ನಡೆಯುವ ಚುನಾವಣೆಯಲ್ಲಿ ಯಾವುದೇ ರೀತಿಯ ಗೊಂದಲ ಬಿತ್ತುವುದಕ್ಕೆ ತಮ್ಮ ವೇದಿಕೆಗಳನ್ನು ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.

ಚುನಾವಣಾ ಭದ್ರತೆಯ ಬಗ್ಗೆ ಆತಂಕಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ಸಮಿತಿಯ ಸೆನೆಟರ್‌ಗಳು ‘ತಮ್ಮ ಕಂಪನಿಗಳು ವಿದೇಶಿಯರಿಂದ ಅಥವಾ ಚುನಾವಣಾ ಫಲಿತಾಂಶಗಳ ಸುತ್ತ ಹಿಂಸಾಚಾರವನ್ನು ಪ್ರಚೋದಿಸದಂತೆ ಎಚ್ಚರವಹಿಸಲಿವೆ ಎಂದು ಟ್ವಿಟರ್‌ನ ಜಾಕ್ ಡೊರ್ಸೆ, ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್ ಮತ್ತು ಗೂಗಲ್‌ನ ಸುಂದರ್ ಪಿಚೈ ಅವರಿಂದ ಪ್ರಮಾಣ ಪತ್ರ ಪಡೆದುಕೊಂಡರು.

‘ನಮ್ಮ ಪಕ್ಷದ ಸೆನೆಟರ್‌ಗಳು ಸಂಪ್ರದಾಯ ವಿರೋಧಿ, ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಧಾರರಹಿತವಾಗಿ ಆರೋಪಿಸುತ್ತಿವೆ ಎಂದು ಈ ಮೂರು ಜಾಲತಾಣಗಳ ವಿರುದ್ಧ ರಿಪಬ್ಲಿಕನ್‌ ಸೆನೆಟರ್‌ಗಳು ದೂರಿದ್ದರು. ಈ ಸಂಬಂಧ ಸೆನೆಟರ್ ವಾಣಿಜ್ಯ ಸಮಿತಿ ಎದುರು ವಿಚಾರಣೆಗೆ ಹಾಜರಾಗುವಂತೆ ಮೂರು ಕಂಪನಿಯ ಸಿಇಒಗಳಿಗೆ ನೋಟಿಸ್ ನೀಡಲಾಗಿತ್ತು. ನೋಟಿಸ್‌ ಅನ್ವಯ ಮೂವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು