ಗುರುವಾರ , ಮಾರ್ಚ್ 30, 2023
31 °C

ದಕ್ಷಿಣ ಆಫ್ರಿಕಾದ ಲೇಖಕ ಡೇಮನ್‌ ಅವರ 'ದಿ ಪ್ರಾಮಿಸ್‌' ಕೃತಿಗೆ ಬೂಕರ್‌ ಪ್ರಶಸ್ತಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ದಕ್ಷಿಣ ಆಫ್ರಿಕಾದ ಲೇಖಕ ಡೇಮನ್‌ ಗಾಲ್ಗಟ್‌ ಅವರ ಕಾದಂಬರಿ 'ದಿ ಪ್ರಾಮಿಸ್‌' ಪ್ರತಿಷ್ಠಿತ ಬೂಕರ್‌ ಪ್ರಶಸ್ತಿಗೆ ಆಯ್ಕೆಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿನ ವರ್ಣಭೇದ ನೀತಿ ಮತ್ತು ಬಿಳಿಯ ವರ್ಣದ ಕುಟುಂಬದ ಕಥೆಯನ್ನು ಕಾದಂಬರಿ ಒಳಗೊಂಡಿದೆ. 

ಸಂಕಷ್ಟದಲ್ಲಿರುವ ಆಫ್ರಿಕನ್‌ ಕುಟುಂಬ ಹಾಗೂ ಕಪ್ಪು ವರ್ಣದ ವ್ಯಕ್ತಿಗೆ ಉದ್ಯೋಗ ನೀಡುವ ಭರವಸೆ ಸುಳ್ಳಾಗುವುದು- ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ಸುತ್ತಲಿನ ಕಥೆಯನ್ನು ಅಡಕವಾಗಿಸಿಕೊಂಡಿರುವ 'ದಿ ಪ್ರಾಮಿಸ್‌' ಕೃತಿಗೆ ಬ್ರಿಟನ್‌ನ ಬೂಕರ್‌ ಪ್ರಶಸ್ತಿ ಸಂದಿದೆ. ಪ್ರಶಸ್ತಿಯು 50,000 ಪೌಂಡ್‌ (ಸುಮಾರು ₹50 ಲಕ್ಷ) ಬಹುಮಾನವನ್ನು ಒಳಗೊಂಡಿದೆ.

ಡೇಮನ್‌ ಗಾಲ್ಗಟ್‌ ಅವರ ಕಾದಂಬರಿಯು ಬೂಕರ್‌ ಪ್ರಶಸ್ತಿಯ ಆಯ್ಕೆ ಪಟ್ಟಿಗೆ ಈ ಹಿಂದೆಯೂ ಎರಡು ಬಾರಿ ಸೇರ್ಪಡೆಯಾಗಿತ್ತು. ಆದರೆ, ಮೂರನೇ ಬಾರಿಗೆ ಪ್ರಶಸ್ತಿ ಒಲಿದಿದೆ. 2003ರಲ್ಲಿ 'ದಿ ಗುಡ್‌ ಡಾಕ್ಟರ್‌' ಹಾಗೂ 2010ರಲ್ಲಿ 'ಇನ್‌ ಎ ಸ್ಟ್ರೇಂಜ್‌ ರೂಂ' ಕೃತಿಗಳು ಆಯ್ಕೆ ಪಟ್ಟಿಗೆ ಸೇರ್ಪಡೆಯಾಗಿದ್ದವು.

2021ರ ನೊಬೆಲ್‌ ಸಾಹಿತ್ಯ ಪುರಸ್ಕಾರ ಪಡೆದ ಸಾಹಿತಿ ಅಬ್ದುಲ್‌ ರಜಾಕ್‌ ಗುರ್ನಾ ಸಹ ಆಫ್ರಿಕಾದವರು ಎಂಬುದನ್ನು ಡೇಮನ್‌ ಗಾಲ್ಗಟ್‌ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

1969ರಿಂದ ಇಂಗ್ಲಿಷ್‌ನಲ್ಲಿ ಪ್ರಕಟವಾಗಿರುವ ಕೃತಿಗಳಿಗೆ ಬೂಕರ್‌ ಪ್ರಶಸ್ತಿ ನೀಡಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು