ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೇಸ್‌ ಎಕ್ಸ್‌ನ ಸ್ಟಾರ್‌ಶಿಪ್‌ ಎಂಜಿನ್‌ ಕ್ಷಮತೆ ಪರೀಕ್ಷೆ

Last Updated 10 ಫೆಬ್ರುವರಿ 2023, 13:23 IST
ಅಕ್ಷರ ಗಾತ್ರ

ಕ್ಯಾಲಿಫೋರ್ನಿಯಾ: ಸ್ಪೇಸ್‌ ಎಕ್ಸ್‌ ಸಂಸ್ಥೆಯು ತನ್ನ ದೈತ್ಯ ಬಾಹ್ಯಾಕಾಶ ನೌಕೆ ‘ಸ್ಟಾರ್‌ಶಿಪ್‌’ ಅನ್ನು ಕಕ್ಷೆಗೆ ಕಳುಹಿಸುವ ನಿಟ್ಟಿನಲ್ಲಿ ನೌಕೆಯ ಎಂಜಿನ್‌ ಕ್ಷಮತೆ ಪರೀಕ್ಷೆಯನ್ನು ಪೂರ್ಣಗೊಳಿಸಿದೆ.

‘ಮೊದಲ ಹಂತದ 33 ಬೂಸ್ಟರ್‌ ಎಂಜಿನ್‌ಗಳಲ್ಲಿ 31 ಎಂಜಿನ್‌ಗಳನ್ನು ದಕ್ಷಿಣ ಟೆಕ್ಸಾಸ್‌ನ ಉಡ್ಡಯನ ವೇದಿಕೆಯಲ್ಲಿ 10 ಸೆಕೆಂಡ್‌ಗಳ ಕಾಲ ಏಕಕಾಲಕ್ಕೆ ಉರಿಸಲಾಯಿತು. ಈ ವೇಳೆ ನಮ್ಮ ತಂಡವು ಒಂದು ಎಂಜಿನ್‌ನನ್ನು ಆಫ್‌ ಮಾಡಿತ್ತು ಮತ್ತು ಇನ್ನೊಂದು ಎಂಜಿನ್‌ ಅನ್ನು ಸ್ಥಗಿತಗೊಳಿಸಿತ್ತು. ನೌಕೆ ಕಕ್ಷೆಗೆ ತಲುಪಲು ಇಷ್ಟು ಎಂಜಿನ್‌ಗಳು ಸಾಕು’ ಎಂದು ಸ್ಪೇಸ್‌ ಎಕ್ಸ್‌ ಸಿಇಒ ಇಲಾನ್ ಮಸ್ಕ್ ಟ್ವೀಟ್‌ ಮಾಡಿದ್ದಾರೆ.

ಪರೀಕ್ಷೆಯ ವಿಶ್ಲೇಷಣೆ ಮತ್ತು ಸಿದ್ಧತೆಗಳು ಸರಿಯಾಗಿ ನಡೆದರೆ, ಕಕ್ಷೆಗೆ ಸ್ಟಾರ್‌ಶಿಪ್‌ನ ಮೊದಲ ಪರೀಕ್ಷಾ ಹಾರಾಟವು ಮಾರ್ಚ್‌ನಲ್ಲಿ ನಡೆಯಲಿದೆ ಎಂದು ಮಸ್ಕ್‌ ಅವರು ಅಂದಾಜಿಸಿದ್ದಾರೆ.

ಬೂಸ್ಟರ್‌ ಎಂಜಿನ್‌ಗಳ ಪರೀಕ್ಷೆಯ ವೇಳೆ ಉಡ್ಡಯನ ಗೋಪುರಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT