ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮೀಬಿಯಾ: ಭಾರತಕ್ಕೆ 8 ಚೀತಾಗಳನ್ನು ಕರೆದೊಯ್ಯಲು ಬಂದಿಳಿದ ವಿಶೇಷ ವಿಮಾನ

Last Updated 15 ಸೆಪ್ಟೆಂಬರ್ 2022, 11:42 IST
ಅಕ್ಷರ ಗಾತ್ರ

ವಿಂಡ್‌ಹೋಕ್‌, ನಮೀಬಿಯಾ: ಎಂಟು ಚೀತಾಗಳನ್ನು ಭಾರತಕ್ಕೆ ಕರೆದೊಯ್ಯುವ ಸಲುವಾಗಿ ವಿಶೇಷ ವಿಮಾನ ‘ಬೋಯಿಂಗ್‌ 747’ ನಮೀಬಿಯಾ ರಾಜಧಾನಿ ವಿಂಡ್‌ಹೋಕ್‌ಗೆ ಬಂದಿಳಿದಿದೆ.

‘ಹುಲಿಗಳ ನಾಡಿಗೆ ಸೌಹಾರ್ದದ ರಾಯಭಾರಿಗಳನ್ನು ಕರೆದೊಯ್ಯಲು ವಿಶೇಷ ವಿಮಾನವೊಂದು ಶೌರ್ಯದ ನಾಡಿನಲ್ಲಿ ಬಂದಿಳಿದಿದೆ’ ಎಂದು ವಿಂಡ್‌ಹೋಕ್‌ನಲ್ಲಿರುವ ಭಾರತದ ಹೈಕಮಿಷನ್ ಟ್ವೀಟ್‌ ಮಾಡಿದೆ.

ಈ ವಿಶೇಷ ವಿಮಾನದ ಮೂಲಕ ಐದು ಹೆಣ್ಣು ಹಾಗೂ ಮೂರು ಗಂಡು ಚೀತಾಗಳನ್ನು ಸೆ. 17ರಂದು ರಾಜಸ್ಥಾನದ ಜೈಪುರಕ್ಕೆ ತರಲಾಗುವುದು. ನಂತರ, ಈ ವನ್ಯಮೃಗಗಳನ್ನು ಹೆಲಿಕಾಪ್ಟರ್‌ ಮೂಲಕ ಮಧ್ಯ‍ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಕರೆದೊಯ್ಯಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನವಾದ ಸೆಪ್ಟೆಂಬರ್ 17ರಂದು ಈ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಹಸ್ತಾಂತರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT