ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಉಲ್ಬಣ: ಶ್ರೀಲಂಕಾದಲ್ಲಿ ಇಂದಿನಿಂದ 10 ದಿನ ಲಾಕ್‌ಡೌನ್ ಘೋಷಣೆ

Last Updated 20 ಆಗಸ್ಟ್ 2021, 13:47 IST
ಅಕ್ಷರ ಗಾತ್ರ

ಕೊಲಂಬೊ: ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ನೆರೆಯ ಶ್ರೀಲಂಕಾದಲ್ಲಿ ಇಂದು ರಾತ್ರಿಯಿಂದ 10 ದಿನಗಳ ಲಾಕ್‌ಡೌನ್ ಘೋಷಿಸಲಾಗಿದೆ. ಹೆಚ್ಚುತ್ತಿರುವ ಸೋಂಕುಗಳು ಮತ್ತು ಸಾವುಗಳು ದ್ವೀಪ ರಾಷ್ಟ್ರದ ಆರೋಗ್ಯ ವ್ಯವಸ್ಥೆ ಮೇಲೆ ಭಾರೀ ಹೊಡೆತ ಬಿದ್ದಿದೆ.

ಶ್ರೀಲಂಕಾದಲ್ಲಿ ಬುಧವಾರ ಏಕದಿನದಲ್ಲಿ ಅತಿ ಹೆಚ್ಚು 187 ಸಾವು ಮತ್ತು 3,793 ಪ್ರಕರಣಗಳು ದೃಢಪಟ್ಟಿವೆ.

‘ಇಂದು ರಾತ್ರಿ 10 ರಿಂದ ಆಗಸ್ಟ್ 30ರ ರಾತ್ರಿ 10 ಗಂಟೆವರೆಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಯಲ್ಲಿರಲಿದೆ. ಎಲ್ಲಾ ಅಗತ್ಯ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ’ ಎಂದು ಆರೋಗ್ಯ ಸಚಿವ ಕೆಹೆಲಿಯಾ ರಂಬುಕ್ವೆಲ್ಲಾ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ಕೊರೊನಾ ವೈರಸ್ ಕುರಿತ ಅಧ್ಯಕ್ಷೀಯ ಕಾರ್ಯಪಡೆಯ ಸದಸ್ಯರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು, ಇಂದು ಸಂಜೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆ ಇದೆ.

ವೈದ್ಯಕೀಯ ವೃತ್ತಿಪರರು, ಧಾರ್ಮಿಕ ಮುಖಂಡರು, ರಾಜಕಾರಣಿಗಳು ಮತ್ತು ಉದ್ಯಮಿಗಳು ಸೋಂಕು ತಡೆಗೆ ತಕ್ಷಣವೇ ರಾಷ್ಟ್ರವ್ಯಾಪಿ ಲಾಕ್‌ಡೌನ್‌ಗೆ ಕರೆ ನೀಡಿದ್ದಾರೆ.

ರಾಯಿಟರ್ಸ್ ಗ್ಲೋಬಲ್ ಕೋವಿಡ್ ಟ್ರ್ಯಾಕರ್ ಪ್ರಕಾರ, ದೈನಂದಿನ ಸೋಂಕುಗಳ ಸಂಖ್ಯೆ ಈ ತಿಂಗಳಲ್ಲಿ ದ್ವಿಗುಣಗೊಂಡಿದ್ದು, ಸರಾಸರಿ 3,897ಕ್ಕೆ ತಲುಪಿದೆ.

ಹೆಚ್ಚು ಸಾಂಕ್ರಾಮಿಕವಾಗಿರುವ ಡೆಲ್ಟಾ ರೂಪಾಂತರವು ವ್ಯಾಪಕವಾಗಿ ಹರಡುತ್ತಿರುವುದರಿಂದ 3.2 ಕೋಟಿ ಜನಸಂಖ್ಯೆ ಇರುವ ದೇಶದ ಆಸ್ಪತ್ರೆಗಳು ಕೋವಿಡ್ 19 ರೋಗಿಗಳಿಂದ ತುಂಬಿ ತುಳುಕುತ್ತಿವೆ.

ಅನೇಕ ನಿರ್ಬಂಧಗಳು ಈಗಾಗಲೇ ಜಾರಿಯಲ್ಲಿದ್ದು, ಶಾಲೆಗಳು, ಜಿಮ್‌ಗಳು ಮತ್ತು ಈಜುಕೊಳಗಳನ್ನು ಮುಚ್ಚಲಾಗಿದೆ. ಮದುವೆ ಮತ್ತು ಸಂಗೀತ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.ಸೋಮವಾರದಿಂದಲೇರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಪ್ರತಿದಿನ ರಾತ್ರಿ 10 ರಿಂದ ಬೆಳಗಿನ ಜಾವ 4 ರವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಶ್ರೀಲಂಕಾದ ಜನಸಂಖ್ಯೆಯ ಕಾಲು ಭಾಗದಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರಿಗೆ ಚೀನಾದ ಸಿನೋಫಾರ್ಮ್ ಲಸಿಕೆ ನೀಡಲಾಗಿದೆ.

ಶ್ರೀಲಂಕಾವು ಫೈಜರ್, ಮಾಡರ್ನಾ, ಅಸ್ಟ್ರಾಜೆನೆಕಾ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗಳನ್ನು ಅನುಮೋದಿಸಿದೆ.

ಕಳೆದ ವರ್ಷ ಕೊರೊನಾ ಸೋಂಕು ಸ್ಫೋಟವಾದಾಗಿನಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT