ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದೊಂದಿಗಿನ ಸಂಘರ್ಷ ತಪ್ಪಿಸಲು ಲಂಕಾ ಸಂಸತ್ತಿನಲ್ಲಿ ಇಮ್ರಾನ್ ಭಾಷಣ ರದ್ದು

Last Updated 22 ಫೆಬ್ರುವರಿ 2021, 9:09 IST
ಅಕ್ಷರ ಗಾತ್ರ

ಕೊಲಂಬೊ: ಭಾರತದೊಂದಿಗಿನ ಸಂಘರ್ಷವನ್ನು ತಪ್ಪಿಸುವ ನಿಟ್ಟಿನಲ್ಲಿ ಶ್ರೀಲಂಕಾ ಸಂಸತ್ತಿನಲ್ಲಿ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ನಿಗದಿತ ಭಾಷಣವನ್ನು ರದ್ದುಗೊಳಿಸಲಾಗಿದೆ.

ಚೀನಾದ ಸಾಲದ ಹೊರೆಗೆ ಸಿಲುಕಿಕೊಂಡಿರುವ ಶ್ರೀಲಂಕಾ ಸರ್ಕಾರವು ಭಾರತದೊಂದಿಗಿನ ಸಂಬಂಧವನ್ನು ಹದೆಗೆಡಿಸಿ ಮತ್ತಷ್ಟು ಅಪಾಯವವನ್ನು ಆಹ್ವಾನಿಸಲು ಸಿದ್ಧರಿಲ್ಲ. ಇನ್ನೊಂದೆಡೆ ಕೋವಿಡ್-19 ಲಸಿಕೆಗಳನ್ನು ವಿತರಿಸಿ ಭಾರತ ನೆರೆಯ ರಾಷ್ಟ್ರಕ್ಕೆ ನೆರವಾಗುತ್ತಿದೆ.

ಕೊಲಂಬೊ ಗೆಜೆಟ್‌ ಮಾಧ್ಯಮದಲ್ಲಿ ಈ ಕುರಿತು ವರದಿ ಪ್ರಕಟವಾಗಿದ್ದು, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಸಂಸತ್ತಿನಲ್ಲಿ ನಿಗದಿತ ಭಾಷಣವನ್ನು ರದ್ದುಗೊಳಿಸುವ ಮೂಲಕ ಭಾರತದೊಂದಿಗಿನ ಮುಖಾಮುಖಿಯನ್ನು ಶ್ರೀಲಂಕಾ ತಪ್ಪಿಸಿದೆ.

ಇತ್ತೀಚೆಗಷ್ಟೇ ಭಾರತವು ಶ್ರೀಲಂಕಾಕ್ಕೆ ಐದು ಲಕ್ಷ ಕೋವಿಡ್-19 ಲಸಿಕೆ ಡೋಸ್‌ಗಳನ್ನು ಉಡುಗೊರೆಯಾಗಿ ನೀಡಿತ್ತು.

ಕಳೆದ ಕೆಲವು ತಿಂಗಳುಗಳಿಂದ ಶ್ರೀಲಂಕಾದಲ್ಲಿ ಮುಸ್ಲಿಂ ವಿರೋಧಿ ಭಾವನೆ ಕೂಡಾ ಮೂಡಿಬರುತ್ತಿದ್ದು, ಮಸೀದಿಗಳಲ್ಲಿ ಪ್ರಾಣಿ ಬಲಿ ನೀಡುವ ಕುರಿತಾಗಿ ಬೌದ್ಧ ಅನುಯಾಯಿಗಳು ಪ್ರತಿಭಟನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT