ಮಂಗಳವಾರ, ಮೇ 24, 2022
24 °C

ಶ್ರೀಲಂಕಾ ಸಂಸತ್ತಿನಲ್ಲಿ ಇಮ್ರಾನ್ ಖಾನ್ ಭಾಷಣ ರದ್ದು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಲಂಬೊ/ಇಸ್ಲಮಾಬಾದ್‌: ‘ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಮುಂದಿನ ತಮ್ಮ ಕೊಲಂಬೊ ಭೇಟಿಯಲ್ಲಿ  ಶ್ರೀಲಂಕಾದ ಸಂಸತ್ತಿನಲ್ಲಿ ಮಾಡಬೇಕಿದ್ದ ಭಾಷಣವನ್ನು ಅಲ್ಲಿನ ಸರ್ಕಾರ ರದ್ದುಗೊಳಿಸಿದೆ‘ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಈಗಾಗಲೇ ನಿಗದಿಯಾಗಿರುವಂತೆ ಪಾಕಿಸ್ತಾನ ಪ್ರಧಾನಿಯವರ ಶ್ರೀಲಂಕಾ ಪ್ರವಾಸ ಮುಂದುವರಿಯಲಿದೆ.  ಆದರೆ, ಅವರ ಉದ್ದೇಶಿತ ಸಂಸತ್ತಿನ ಭೇಟಿಯನ್ನು ರದ್ದುಗೊಳಿಸಲಾಗಿದೆ‘ ಎಂದು ವಿದೇಶಾಂಗ ಸಚಿವಾಲಯ ಸಂಸತ್ತಿನ ಅಧಿಕಾರಿಗಳಿಗೆ ತಿಳಿಸಿದೆ.

‘ಕೋವಿಡ್‌ ಹಿನ್ನೆಲೆಯಲ್ಲಿ ಸ್ಪೀಕರ್ ಮಹಿಂದಾ ಯಪ ಅಭಯ್‌ವರ್ದೆನಾ ಅವರ ಮನವಿ ಮೇರೆಗೆ ಇಮ್ರಾನ್ ಖಾನ್ ಅವರ ಭಾಷಣವನ್ನು ರದ್ದುಗೊಳಿಸಲಾಯಿತು‘ ಎಂದು ವಿದೇಶಾಂಗ ಸಚಿವ ಜಯಂತ್ ಕೊಲೊಂಬೇಜ್‌ ಹೇಳಿರುವುದಾಗಿ ಶ್ರೀಲಂಕಾದ ‘ಡೈಲಿ ಎಕ್ಸ್‌ಪ್ರೆಸ್‌’ ಪತ್ರಿಕೆ ವರದಿ ಮಾಡಿದೆ.

ಇಮ್ರಾನ್‌ ಖಾನ್ ಅವರ ಎರಡು ದಿನಗಳ ಲಂಕಾ ಪ್ರವಾಸ ಇದೇ 22 ರಿಂದ ಆರಂಭವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು