ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಿಂದ ಪಲಾಯನ ಮಾಡಿದ್ದ ಪದಚ್ಯುತ ಅಧ್ಯಕ್ಷ ಗೊಟಬಯಗೆ ಕಾನೂನು ಕ್ರಮದ ಆತಂಕ

Last Updated 4 ಸೆಪ್ಟೆಂಬರ್ 2022, 13:40 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾದಿಂದ ಪಲಾಯನ ಮಾಡಿದ್ದ ಪದಚ್ಯುತ ಅಧ್ಯಕ್ಷಗೊಟಬಯ ರಾಜಪಕ್ಸೆ ಅವರು ಏಳು ವಾರಗಳ ನಂತರ ಸ್ವದೇಶಕ್ಕೆ ವಾಪಸಾಗಿದ್ದು, ಸದ್ಯ ಅವರಿಗೆ ಸಾಂವಿಧಾನಿಕ ವಿನಾಯಿತಿಗಳ ರಕ್ಷಣೆ ಇಲ್ಲ. 12 ವರ್ಷಗಳ ಹಿಂದೆ ಇಬ್ಬರು ಯುವ ರಾಜಕೀಯ ಹೋರಾಟಗಾರರನ್ನು ಕಣ್ಮರೆಗೊಳಿಸಿದ ಸಂಬಂಧ ಈಗ ಅವರು ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂದು ವಕೀಲರು ಶನಿವಾರ ತಿಳಿಸಿದರು.

ಇಬ್ಬರು ಯುವ ರಾಜಕೀಯ ಹೋರಾಟಗಾರರ ಕಣ್ಮರೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲುಕಳೆದ ಜೂನ್‌ನಲ್ಲೇ ರಾಜಪಕ್ಸ ಅವರಿಗೆ ಸಮನ್ಸ್‌ ನೀಡಲಾಗಿತ್ತು. ಆಗ ಅವರು ದೇಶದಿಂದ ಪರಾರಿಯಾಗಿದ್ದರು. ಮುಂದಿನ ವಾರ ಸುಪ್ರೀಂಕೋರ್ಟ್‌ ಎದುರು ವಿಚಾರಣೆಗೆ ಹಾಜರಿರಲು ಸಮನ್ಸ್‌ ಕೊಡಿಸಲಾಗುವುದು ಎಂದುಸಂತ್ರಸ್ತ ಕುಟುಂಬಗಳ ಪ್ರತಿನಿಧಿ ವಕೀಲ ನುವಾನ್ ಬೋಪೇಜ್ ಹೇಳಿದ್ದಾರೆ.

ಅಧ್ಯಕ್ಷರಾಗಿದ್ದಾಗ ಅವರಿಗಿದ್ದ ಸಾಂವಿಧಾನಿಕ ವಿನಾಯಿತಿ ರಕ್ಷಣೆಯಿಂದಾಗಿನ್ಯಾಯಾಲಯ ಪ್ರಕರಣಗಳು ಬಾಕಿ ಇರಲಿಲ್ಲ. 2019ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಗೊಟಬಯ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನೂ ರಕ್ಷಣಾ ಅಧಿಕಾರಿಗಳು ಹಿಂಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT