ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ: ಆ.10ರವರೆಗೆ ಪ್ರತಿಭಟನೆ ಮುಂದುವರಿಯುವ ಸಾಧ್ಯತೆ

Last Updated 5 ಆಗಸ್ಟ್ 2022, 14:31 IST
ಅಕ್ಷರ ಗಾತ್ರ

ಕೊಲಂಬೊ: ಗಾಲ್ ಫೇಸ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಕಾರರನ್ನು ತೆರವುಗೊಳಿಸುವುದಿಲ್ಲ ಮತ್ತು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಶುಕ್ರವಾರ ಇಲ್ಲಿನ ಸುಪ್ರೀಂ ಕೋರ್ಟ್‌ನಲ್ಲಿ ಅಟಾರ್ನಿ ಜನರಲ್ ಭರವಸೆ ನೀಡಿದ ನಂತರ, ಶ್ರೀಲಂಕಾದ ಅಧ್ಯಕ್ಷೀಯ ಕಚೇರಿ ಬಳಿ ಆಗಸ್ಟ್‌ 10ರವರೆಗೆ ಪ್ರತಿಭಟನೆಗಳು ಮುಂದುವರಿಯುವ ಸಾಧ್ಯತೆ ಇದೆ.

ಶುಕ್ರವಾರ ಸಂಜೆಯೊಳಗೆ ಪ್ರತಿಭಟನೆ ನಡೆಸುತ್ತಿದ್ದ ಪ್ರದೇಶವನ್ನು ಖಾಲಿ ಮಾಡುವಂತೆ ಪೊಲೀಸರು ನೀಡಿದ್ದ ಆದೇಶವನ್ನು ಧಿಕ್ಕರಿಸುವುದಾಗಿ ಪ್ರತಿಭಟನಕಾರರು ಪ್ರತಿಜ್ಞೆ ಮಾಡಿದ ಒಂದು ದಿನದ ನಂತರ ಈ ಬೆಳವಣಿಗೆಯಾಗಿದೆ. ಹಿಂದಿನ ರಾಜಪಕ್ಸ ಆಡಳಿತದ ವಿರುದ್ಧ ಇಲ್ಲಿನ ಸರ್ಕಾರಿ ವಿರೋಧಿ ಪ್ರತಿಭಟನೆಗಳ ಕೇಂದ್ರಬಿಂದುವಾಗಿದ್ದ ಗಾಲ್ ಫೇಸ್ ಪ್ರದೇಶದಿಂದ ಅವರನ್ನು ತೆರವುಗೊಳಿಸಲು ಪೊಲೀಸರು ನ್ಯಾಯಾಲಯದ ಆದೇಶವನ್ನು ಪಡೆದಿಲ್ಲ ಎಂದು ಪ್ರತಿಭಟನಕಾರರು ಹೇಳಿದ್ದರು.

ಪ್ರತಿಭಟನಕಾರರ ಪರವಾಗಿ ಮೂರು ರಿಟ್ ಅರ್ಜಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಸರಿಯಾದ ಕಾನೂನು ವಿಧಾನವನ್ನು ಅನುಸರಿಸದೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಅಟಾರ್ನಿ ಜನರಲ್ ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಿದರು.

ಈ ಮೊದಲು, ಅಧ್ಯಕ್ಷೀಯ ಕಚೇರಿಯ ಬಳಿಯಿರುವ ಗಾಲ್ ಫೇಸ್‌ನಲ್ಲಿರುವ ಎಲ್ಲಾ ಅಕ್ರಮ ಟೆಂಟ್‌ಗಳು ಮತ್ತು ಶಿಬಿರಗಳನ್ನು ತೆಗೆದುಹಾಕಲು ಪ್ರತಿಭಟನಕಾರರಿಗೆ ಶ್ರೀಲಂಕಾ ಪೊಲೀಸರು ಆಗಸ್ಟ್‌ 5ರವರೆಗೆ ಗಡುವನ್ನು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT