ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಬರಲು ರಾಜಪಕ್ಸಗೆ ಭದ್ರತೆ ಕೊಡಿ: ರಾನಿಲ್‌ಗೆ ಆಡಳಿತ ಪಕ್ಷ ಒತ್ತಾಯ

Last Updated 19 ಆಗಸ್ಟ್ 2022, 14:10 IST
ಅಕ್ಷರ ಗಾತ್ರ

ಕೊಲಂಬೊ: ಆರ್ಥಿಕ ಸಂಕಷ್ಟದ ಸುಳಿಯಲ್ಲಿರುವ ದ್ವೀಪ ರಾಷ್ಟ್ರದಿಂದ ಪಲಾಯನ ಮಾಡಿರುವ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರಿಗೆ ದೇಶಕ್ಕೆ ಮರಳಲು ಭದ್ರತೆ ಮತ್ತು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ಆಡಳಿತ ಪಕ್ಷಶ್ರೀಲಂಕಾ ಪೊದುಜನ ಪೆರಮುನ (ಎಸ್‌ಎಲ್‌ಪಿ) ರಾಷ್ಟ್ರದ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಅವರಿಗೆ ಒತ್ತಾಯಿಸಿದೆ.

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ದಿವಾಳಿಯಾದ ದೇಶದಲ್ಲಿ ಜನರು ಸರ್ಕಾರದ ವಿರುದ್ಧಕಳೆದ ತಿಂಗಳು ದಂಗೆ ಎದ್ದ ಪರಿಣಾಮ ಗೊಟಬಯ ರಾಜಪಕ್ಸ ದೇಶ ತೊರೆದಿದ್ದಾರೆ.ಮುಂದಿನ ವಾರ ಅವರು ಶ್ರೀಲಂಕಾಕ್ಕೆ ಮರಳಬಹುದು ಎನ್ನುವ ವರದಿಗಳಿವೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಸಾಗರ್‌ ಕರಿಯಾವಾಸಮ್‌ ಅವರು ಅಧ್ಯಕ್ಷ ವಿಕ್ರಮಸಿಂಘೆ ಅವರ ಜತೆಗೆ ಗುರುವಾರ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ರಾಜಪಕ್ಸ ಅವರ ಮರಳುವಿಕೆಗೆ ಅಗತ್ಯ ವ್ಯವಸ್ಥೆ ಮಾಡುವಂತಮನವಿ ಮಾಡಲಾಗಿದೆ ಎಂದರು.

ಅಮೆರಿಕ ಗ್ರೀನ್‌ ಕಾರ್ಡ್‌ಗೆ ಗೊಟಬಯ ಅರ್ಜಿ:

ದೇಶದಿಂದ ಪಲಾಯನ ಮಾಡಿರುವ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಅಮೆರಿಕ ಪೌರತ್ವದ ಗ್ರೀನ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ರಾಜಪಕ್ಸ ಅವರ ಪತ್ನಿ ಲೋಮಾ ರಾಜಪಕ್ಸ ಅವರು ಅಮೆರಿಕದ ಪ್ರಜೆಯಾಗಿರುವುದರಿಂದ ಗೊಟಬಯ ಅವರು ಅಮೆರಿಕ ಪೌರತ್ವ ಪಡೆಯಲು ಅರ್ಹರಾಗಿದ್ದಾರೆ.

ಗೊಟಬಯ ಅವರು2019ರಲ್ಲಿ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಅಮೆರಿಕ ಪೌರತ್ವವನ್ನು ತ್ಯಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT