ಲಂಡನ್: ಶ್ರೀಲಂಕಾದ ಲೇಖಕ ಶೆಹಾನ್ ಕರುಣಾತಿಲಕ (47) ಅವರ ಎರಡನೇ ಕಾದಂಬರಿ ‘ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ಮೇಡಾ’ ಕೃತಿಗೆ 2022ನೇ ಸಾಲಿನ ಪ್ರತಿಷ್ಠಿತ ಬುಕರ್ ಪ್ರಶಸ್ತಿ ದೊರೆತಿದೆ.
ಕರುಣತಿಲಕ ಅವರ ಈ ಕಾದಂಬರಿಯು 1990ರ ದಶಕದಲ್ಲಿ ಶ್ರೀಲಂಕಾ ಕಂಡ ಅತ್ಯಂತ ಕ್ರೂರ ಆಂತರಿಕ ಯುದ್ಧದಲ್ಲಿ ಕೊಲೆಯಾದ ಛಾಯಾಗ್ರಾಹಕ ಮಾಲಿ ಅಲ್ಮೇಡಾ ಅವರ ಕುರಿತಾದ, ಮಾಲಿ ಕೊಲೆಯ ನಂತರದ ತನಿಖೆಯ ರೋಚಕ ಕಥಾವಸ್ತುವನ್ನು ತೆರೆದಿಡುತ್ತದೆ. ‘ದಿ ಸೆವೆನ್ ಮೂನ್ಸ್ ಆಫ್ ಮಾಲಿಅಲ್ಮೇಡಾ’ ಕಾದಂಬರಿಯನ್ನು ಇಂಡಿಪೆಂಡೆಂಟ್ ಪ್ರೆಸ್ ಸಾರ್ಟ್ ಆಫ್ ಬುಕ್ಸ್ ಪ್ರಕಟಿಸಿದೆ.
ಸೋಮವಾರ ರಾತ್ರಿ ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಕರುಣಾತಿಲಕ ಅವರು50 ಸಾವಿರ ಪೌಂಡ್ (₹ 46.50 ಲಕ್ಷ) ನಗದು ಒಳಗೊಂಡಸಾಹಿತ್ಯ ಬಹುಮಾನ ಸ್ವೀಕರಿಸಿದ ಶ್ರೀಲಂಕಾ ಮೂಲದ ಎರಡನೇ ಕಾದಂಬರಿಕಾರ ಎನಿಸಿಕೊಂಡರು.ಲಂಕಾ ಮೂಲದ ಕಾದಂಬರಿಕಾರ ಮೈಕೆಲ್ ಒಂಡಾಟ್ಜೆ ಅವರ ‘ದಿ ಇಂಗ್ಲಿಷ್ ಪೇಷೆಂಟ್’ ಕಾದಂಬರಿಗೆ 1992ರಲ್ಲಿ ಬುಕರ್ ಪ್ರಶಸ್ತಿ ಲಭಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.