ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

400 ಕೋಟಿ ಡಾಲರ್‌ ನೆರವು–ಐಎಂಎಫ್‌ಗೆ ಮೊರೆ: ಅಮೆರಿಕಕ್ಕೆ ತೆರಳಿದ ಶ್ರೀಲಂಕಾ ನಿಯೋಗ

Last Updated 17 ಏಪ್ರಿಲ್ 2022, 10:31 IST
ಅಕ್ಷರ ಗಾತ್ರ

ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾ, ನೆರವಿಗಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಮೊರೆ ಹೋಗಲು ಮುಂದಾಗಿದೆ.

ದೇಶದ ಆರ್ಥಿಕತೆಯನ್ನು ಹಳಿಗೆ ತರುವ ಸಲುವಾಗಿ 400 ಕೋಟಿ ಡಾಲರ್ ನೆರವು ನೀಡುವಂತೆ ಐಎಂಎಫ್‌ಗೆ ಕೋರಲು ಶ್ರೀಲಂಕಾ ನಿರ್ಧರಿಸಿದೆ. ಈ ವಿಷಯದಲ್ಲಿ ಐಎಂಎಫ್‌ನೊಂದಿಗೆ ಮಾತುಕತೆ ನಡೆಸಲು ನೆರವಾಗುವಂತೆ ಕೋರಲು ಶ್ರೀಲಂಕಾ ಸರ್ಕಾರದ ನಿಯೋಗವೊಂದು ಅಮೆರಿಕಕ್ಕೆ ತೆರಳಿದೆ.

ನೂತನ ಹಣಕಾಸು ಸಚಿವ ಅಲಿ ಸಬ್ರಿ ನೇತೃತ್ವದ ನಿಯೋಗವು ಏ. 19ರಿಂದ 24ರ ವರೆಗೆ ಐಎಂಎಫ್‌ ಜೊತೆ ಈ ಸಂಬಂಧ ಮಾತುಕತೆ ನಡೆಸಲಿದೆ.

‘ಐಎಂಎಫ್‌ನ ನೆರವು ಕೇಳಬೇಕು ಎಂಬ ಸಲಹೆಗಳನ್ನು ಈ ಮೊದಲು ನಾವು ತಿರಸ್ಕರಿಸಿದ್ದೆವು. ಈಗ ವಿದೇಶಿ ವಿನಿಮಯ ಕೊರತೆಯನ್ನು ನೀಗಿಸಿ, ಆ ಮೂಲಕ ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕಿದೆ. ಹೀಗಾಗಿ, ಐಎಂಎಫ್‌ನಿಂದ 400ಕೋಟಿ ಡಾಲರ್‌ ನೆರವು ಪಡೆಯಲು ನಿರ್ಧರಿಸಿದ್ದೇವೆ’ ಎಂದು ಸಬ್ರಿ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ದ್ವೀಪರಾಷ್ಟ್ರವು 700 ಕೋಟಿ ಸಾಲ ಮರುಪಾವತಿ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT