ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದ 22ನೇ ಸಂವಿಧಾನ ತಿದ್ದುಪಡಿಗೆ ಸುಪ್ರೀಂ ಕೋರ್ಟ್‌ ಸಮ್ಮತಿ

Last Updated 6 ಸೆಪ್ಟೆಂಬರ್ 2022, 12:25 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾದಲ್ಲಿ ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸಿ ಸಂಸತ್‌ಗೆ ಪರಮಾಧಿಕಾರವನ್ನು ನೀಡುವ ಸಂವಿಧಾನದ 22ನೇ ತಿದ್ದುಪಡಿ ಮಸೂದೆಗೆ ದೇಶದ ಸುಪ್ರೀಂ ಕೋರ್ಟ್‌ ಸಮ್ಮತಿ ಸೂಚಿಸಿದೆ.

ಸಂಸತ್‌ನ ಮೂರನೇ ಎರಡರಷ್ಟು ಸದಸ್ಯರ ಬೆಂಬಲ ಇದ್ದರೆ ಮಾತ್ರ ಈ ಮಸೂದೆಯ ಅಂಗೀಕಾರ ಸಾಧ್ಯ, ತಿದ್ದುಪಡಿಯಲ್ಲಿನ ಕೆಲವು ಅಂಶಗಳಿಗೆ ರಾಷ್ಟ್ರವ್ಯಾಪಿ ಜನಮತಗಣನೆ ಬೇಕಾಗುತ್ತದೆ ಎಂಬ ಷರತ್ತಿನೊಂದಿಗೆ ಕೋರ್ಟ್‌ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಿದೆ.

225 ಸದಸ್ಯ ಬಲದ ಸಂಸತ್‌ನಲ್ಲಿ ಈ ಮಸೂದೆಗೆ ಮೂರನೇ ಎರಡು ಬಹುಮತದೊಂದಿಗೆ ಒಪ್ಪಿಗೆ ದೊರೆತರೆ, 2015ರಲ್ಲಿ ದೇಶದಲ್ಲಿ ಜಾರಿಗೆ ತರಲಾದ ಸುಧಾರಣಾ ಕ್ರಮಗಳು ಮತ್ತೆ ಜಾರಿಗೆ ಬರಲಿವೆ. 2019ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಗೊಟಬಯ ರಾಜಪ‍ಕ್ಸ ಅವರು ಎಲ್ಲಾ ಅಧಿಕಾರವೂ ತಮ್ಮ ಬಳಿಯೇ ಇರುವಂತೆ ನೋಡಿಕೊಳ್ಳಲು ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದರು.

ಪರಮಾಧಿಕಾರ ಹೊಂದಿದ್ದ ಗೊಟಬಯ ಅವರು ದೇಶದ ಆರ್ಥಿಕತೆ ಬಿಕ್ಕಟ್ಟಿಗೆ ಪ್ರಮುಖ ಕಾರಣರಾದರು ಎಂಬ ಕಾರಣಕ್ಕೆ ಜುಲೈ ತಿಂಗಳಲ್ಲಿ ಜನ ದಂಗೆ ಎದ್ದು ಅವರು ಅಧಿಕಾರ ತ್ಯಜಿಸುವಂತೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT