ಬುಧವಾರ, ಅಕ್ಟೋಬರ್ 20, 2021
29 °C

ಮನೆಯಲ್ಲೇ ಇರಿ: ಕಾಬೂಲ್‌ನ ಮಹಿಳಾ ನೌಕರರಿಗೆ ತಾಲಿಬಾನ್ ಸೂಚನೆ

AP Updated:

ಅಕ್ಷರ ಗಾತ್ರ : | |

ಕಾಬೂಲ್‌: ನಗರದ ಮಹಿಳಾ ಉದ್ಯೋಗಿಗಳು ಮನೆಯೊಳಗೇ ಇರಬೇಕು ಎಂದು ರಾಷ್ಟ್ರದ ತಾಲಿಬಾನ್‌ ಆಡಳಿತ ಘೋಷಿಸಿದೆ ಎಂದು ಇಲ್ಲಿನ ಹಂಗಾಮಿ ಮೇಯರ್‌ ಹಮ್ದುಲ್ಲಾ ನಮೋನಿ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ವಿನ್ಯಾಸ ಮತ್ತು ಎಂಜಿನಿಯರಿಂಗ್‌ ವಿಭಾಗಳಲ್ಲಿನ  ಮಹಿಳಾ ಕುಶಲಕರ್ಮಿಗಳು ಮತ್ತು ಮಹಿಳಾ ಶೌಚಾಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರು ಮಾತ್ರ ಕೆಲಸ ಮಾಡಲು ಅನುಮತಿ ಇದೆ ಎಂದು ತಿಳಿಸಿದ್ದಾರೆ.

ಓದಿ: 

ಕಾಬೂಲ್‌ ಮುನ್ಸಿಪಲ್‌ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಗಳ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ. ಅವರಿಗೆ ವೇತನ ಸದ್ಯಕ್ಕೆ ಸಿಗಲಿದೆ ಎಂದಿದ್ದಾರೆ.

1990ರಲ್ಲಿ ತಾಲಿಬಾನ್‌ ಸರ್ಕಾರ ಇದ್ದ ಸಂದರ್ಭದಲ್ಲೂ ಶಾಲೆ ಮತ್ತು ಉದ್ಯೋಗದಿಂದ ಹೆಣ್ಣುಮಕ್ಕಳು ಮತ್ತು ಮಹಿಳೆಯರನ್ನು ದೂರ ಇಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು